‘ಸಮಾಜಮುಖಿ ಕ್ಷೇತ್ರ ಆಯ್ದುಕೊಳ್ಳಿ’

7
ಎಸ್ಸೆಲ್ಲಾರ್ ಮಾನ್ಯುಫ್ಯಾಕ್ಟರಿಂಗ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ಮುರಳಿಕೃಷ್ಣ ಕರೆ

‘ಸಮಾಜಮುಖಿ ಕ್ಷೇತ್ರ ಆಯ್ದುಕೊಳ್ಳಿ’

Published:
Updated:
Deccan Herald

ಬೆಂಗಳೂರು: ಸಮಾಜಮುಖಿ ಕ್ಷೇತ್ರ ಆಯ್ಕೆ ಮಾಡಿಕೊಂಡು ದೇಶದ ಪ್ರಗತಿಯಲ್ಲಿ ಭಾಗಿಯಾಗುವಂತೆ ಎಸ್ಸೆಲ್ಲಾರ್ ಮಾನ್ಯುಫ್ಯಾಕ್ಟರಿಂಗ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ಮುರಳಿಕೃಷ್ಣ ಕರೆ ನೀಡಿದರು.

ಕೆ.ಆರ್‌.ಪುರ ಸಮೀಪ ಬಸವನಪುರದ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅಮೂಲ್ಯವಾದದ್ದು. ಆದ್ದರಿಂದ ಮುಂದಿನ ಆಯ್ಕೆಯ ನಿಮ್ಮ ಜೀವನ ಉತ್ತಮ ರೀತಿಯಲ್ಲಿರುವಂತೆ ನೋಡಿಕೊಳ್ಳಿ. ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಕಾಲೇಜಿಗೆ ಕೀರ್ತಿ ತರಬೇಕು’ ಎಂದರು. ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಎಚ್.ಎಂ.ಚಂದ್ರಶೇಖರ್ ಮಾತನಾಡಿ, ‘ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯಿರಿ’ ಎಂದರು. ಕಾರ್ಯಕ್ರಮದಲ್ಲಿ ಬಿಬಿಎಂ, ಬಿಸಿಎ, ಬಿಕಾಂ, ಎಂಕಾಂ 180 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !