ಬುಧವಾರ, ಏಪ್ರಿಲ್ 14, 2021
31 °C

ನಗರಕ್ಕೆ ಬಂದ ಜಿಂಕೆ: ಗ್ರಾಮಸ್ಥರಿಂದ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೈಟ್ ಪೀಲ್ಡ್: ಕಾಡಿನಿಂದ ಆಕಸ್ಮಿಕವಾಗಿ ದಾರಿತಪ್ಪಿ ನಾಡಿಗೆ ಬಂದ ಜಿಂಕೆಯನ್ನು ವರ್ತೂರು ಗ್ರಾಮಸ್ಥರು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ‌.

ವರ್ತೂರು ಸಮೀಪವಿರುವ ಗುಂಜೂರು ಪಾಳ್ಯ ಅರಣ್ಯ ಪ್ರದೇಶದಿಂದ ದಾರಿತಪ್ಪಿ ಬಂದು ಎರಡು ದಿನಗಳಿಂದ ವರ್ತೂರು ಗ್ರಾಮದ ತೋಟಗಳ ಬಳಿ ಸುತ್ತಾಡಿಕೊಂಡಿತ್ತು. ಇದನ್ನು ಕಂಡ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ತಿರುಗುತ್ತಿದ್ದವು. ಗುರುವಾರ ವರ್ತೂರಿನ ಈದ್ಗಾ ರಸ್ತೆಯಲ್ಲಿ ನಾಯಿಗಳು ಜಿಂಕೆಯನ್ನು ಓಡಿಸಿಕೊಂಡು ಬಂದಿದ್ದನ್ನು ಗಮನಿಸಿದ ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸಿದ್ದಾರೆ. 

‘ಗುಂಜೂರು ಪಾಳ್ಯದ ಅರಣ್ಯ ಪ್ರದೇಶದಲ್ಲಿ ಈ ಜಿಂಕೆಗಳಿವೆ. ಅವುಗಳಲ್ಲಿ ಒಂದು ನೀರು ಅಥವಾ ಆಹಾರ ಅರಸಿ ಅಲ್ಲಿಂದ ಹೊರಬಂದಿದೆ. ಜಿಂಕೆಗೆ ಸಣ್ಣ ಪ್ರಮಾಣದಲ್ಲಿ ತರಚಿದ ಗಾಯ ಬಿಟ್ಟರೆ ಯಾವುದೆ ರೀತಿಯ ಗಂಭೀರ ಗಾಯವಾಗಿಲ್ಲ. ತರಚಿದ್ದ ಗಾಯಕ್ಕೆ ಚಿಕಿತ್ಸೆ ನೀಡಿ, ಮರಳಿ ಅರಣ್ಯಕ್ಕೆ ಬಿಡಲಾಗಿದೆ’ ಎಂದು ವರ್ತೂರು ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು