ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರೇಶ್ ರಾವ್ ಬಾರ್ಕೂರುಗೆ ‘ಕಾಳಿಂಗ ನಾವಡ ಪ್ರಶಸ್ತಿ’

Published 27 ನವೆಂಬರ್ 2023, 21:14 IST
Last Updated 27 ನವೆಂಬರ್ 2023, 21:14 IST
ಅಕ್ಷರ ಗಾತ್ರ

ಬೆಂಗಳೂರು: ಕಲಾ ಕದಂಬ ಆರ್ಟ್ ಸೆಂಟರ್ ನೀಡುವ 2023ನೇ ಸಾಲಿನ ‘ಕಾಳಿಂಗ ನಾವಡ ಪ್ರಶಸ್ತಿ’ಗೆ ಭಾಗವತರು, ಪ್ರಸಂಗಕರ್ತರು ಆದ ಸುರೇಶ್ ರಾವ್ ಬಾರ್ಕೂರು ಆಯ್ಕೆಯಾಗಿದ್ದಾರೆ.

‘ಸಂಸ್ಥೆಯು ಪ್ರತಿ ವರ್ಷ ಯಕ್ಷಗಾನ ಸಾಧಕರೊಬ್ಬರಿಗೆ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ₹ 10 ಸಾವಿರ ನಗದು, ಬೆಳ್ಳಿತಟ್ಟೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಡಿ. 25ರ ಸಂಜೆ 6 ಗಂಟೆಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟ ಹಂದಟ್ಟು ಗ್ರಾಮದ ಉರಾಳ ಕೇರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ರಾಧಾಕೃಷ್ಣ ಉರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT