ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದಜ್ಯೋತಿ ವಾರ್ಷಿಕ ಪ್ರಶಸ್ತಿ ಪ್ರಕಟ

Published 16 ಜನವರಿ 2024, 22:15 IST
Last Updated 16 ಜನವರಿ 2024, 22:15 IST
ಅಕ್ಷರ ಗಾತ್ರ

ಬೆಂಗಳೂರು: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್‌ ನೀಡುವ ‘ಜೀವಮಾನ ಸಾಧನೆ’ ಪುರಸ್ಕಾರಕ್ಕೆ ಆಂಕ್‌ಲಂಗ್‌ ವಾದಕಿ ಎಚ್.ಎಸ್. ಅನಸೂಯ ಕುಲಕರ್ಣಿ, ‘ಕಲಾಜ್ಯೋತಿ ಪ್ರಶಸ್ತಿ’ಗೆ ಮೈಸೂರಿನ ಖ್ಯಾತ ಪಿಟೀಲು ವಾದಕ ಕೆ. ನರಸಿಂಹಮೂರ್ತಿ ಮತ್ತು ‘ನಾದಜ್ಯೋತಿ ಪುರಸ್ಕಾರ’ಕ್ಕೆ ಗಾಯಕಿ ರಂಜನಿ ವಾಸುಕಿ ಆಯ್ಕೆಯಾಗಿದ್ದಾರೆ.

‘ಜೀವಮಾನ ಸಾಧನೆ’, ‘ಕಲಾಜ್ಯೋತಿ ಪ್ರಶಸ್ತಿ’ಯು ತಲಾ ₹ 20 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ‘ನಾದಜ್ಯೋತಿ ಪುರಸ್ಕಾರ’ವು ₹ 15 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಫೆ.17ರಂದು ಮಲ್ಲೇಶ್ವರದ 9ನೇ ಕ್ರಾಸ್‌ನಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆಯುವ ಸಂಗೀತ ಸಭಾ ಟ್ರಸ್ಟ್‌ನ 59ನೇ ‘ಸಂಗೀತ ಸಂಭ್ರಮ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಕಟ್ಟೆ ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT