ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಂಟಿಸಿಗೆ ಉತ್ತರ ಪ್ರದೇಶದ ನಿಯೋಗ ಭೇಟಿ

Published 23 ಮೇ 2024, 15:32 IST
Last Updated 23 ಮೇ 2024, 15:32 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಿಎಂಟಿಸಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಬಿಎಂಟಿಸಿ ಅಳವಡಿಸಿಕೊಂಡಿರುವ ಮಾದರಿ ಉಪಕ್ರಮಗಳು, ಸಂಸ್ಥೆಯ ಇತಿಹಾಸ, ಶಕ್ತಿ ಯೋಜನೆಯ ಅನುಷ್ಠಾನ, ಪ್ರಯಾಣಿಕರ ಪಾಸ್ ವ್ಯವಸ್ಥೆ, ಆರ್ಥಿಕ ಕಾರ್ಯಕ್ಷಮತೆ, ಸಂಚಾರ ಆದಾಯ, ಜಾಹೀರಾತು ಶಿಷ್ಟಾಚಾರ, ಸಂಸ್ಥೆಯ ಬಸ್ ವೇಳಾಪಟ್ಟಿ, ಕಾರ್ಯಚರಣೆಗಳ ವೆಚ್ಚ, ಎಲೆಕ್ಟ್ರಿಕ್ ಬಸ್ಸುಗಳ ಹಸಿರು ತಂತ್ರಜ್ಞಾನದ ಕಾರ್ಯಾಚರಣೆ ಬಗ್ಗೆ ಚರ್ಚಿಸಿದರು.

ಬಿಎಂಟಿಸಿ ನಿರ್ದೇಶಕಿ (ಮಾಹಿತಿ ತಂತ್ರಜ್ಞಾನ) ಶಿಲ್ಪಾ ಪ್ರಾತ್ಯಕ್ಷಿಕೆ ನೀಡಿದರು. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಾದ ಪ್ರನ್ನಾತ ಐಶ್ವರ್ಯ, ಪ್ರಧಾನ ವ್ಯವಸ್ಥಾಪಕ (ಟೆಕ್‌) ರಾಜೀವ್ ಆನಂದ್, ಪ್ರಾದೇಶಿಕ ವ್ಯವಸ್ಥಾಪಕ ಕೇಸರಿ ನಂದನ್ ಚೌಧರಿ, ಸೇವಾ ನಿರ್ವಾಹಕ ಅನುರಾಗ್ ಯಾದವ್ ನಿಯೋಗದಲ್ಲಿದ್ದರು. ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಆಚರಣೆ) ಜಿ.ಟಿ. ಪ್ರಭಾಕರ ರೆಡ್ಡಿ, ಮುಖ್ಯ ತಾಂತ್ರಿಕ ಎಂಜಿನಿಯರ್‌ ಎ.ಎನ್. ಗಜೇಂದ್ರ ಕುಮಾರ್, ಗಣಕ ವ್ಯವಸ್ಥಾಪಕಿ ಎ. ಪ್ರಿಯಾಂಕ, ವಿಭಾಗೀಯ ಸಂಚಾರ ಅಧಿಕಾರಿ ಪ್ರತಿಮಾ.ಎಸ್.ವಿ. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT