ಬೆಂಗಳೂರು: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಕೆಂಗೇರಿ ಉಪನಗರದ ಕೆ.ಜಿ.ಗಾಂಧಿ ಆಟದ ಮೈದಾನದಲ್ಲಿ ಗುರುವಾರ (ಮಾರ್ಚ್ 1) ಉದ್ಯೋಗ ಮೇಳ ನಡೆಯಲಿದೆ.
150ಕ್ಕೂ ಹೆಚ್ಚು ಐಟಿ ಹಾಗೂ ಗಾರ್ಮೆಂಟ್ಸ್ ಕಂಪನಿಗಳು ಪಾಲ್ಗೊಳ್ಳ
ಲಿವೆ. ವಿದ್ಯಾರ್ಹತೆ ಹಾಗೂ ಕೌಶಲಕ್ಕೆ ಅನುಗುಣವಾಗಿ ಸ್ಥಳದಲ್ಲಿಯೇ ಕೆಲಸ ಆದೇಶ ಪತ್ರ ನೀಡಲು ಕಂಪನಿಗಳು ನಿರ್ಧರಿಸಿವೆ.