ಬೆಂಗಳೂರು: ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ (ನೈಸ್) ಕಂಪೆನಿಯು ಬೆಂಗಳೂರು ಮತ್ತು ಮೈಸೂರು ಕಾರಿಡಾರ್ ರಸ್ತೆಯ ಪರಿಷ್ಕೃತ ಟೋಲ್ದರ ಪಟ್ಟಿಯನ್ನು ಪ್ರಕಟಿಸಿದೆ.
ಟೋಲ್ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಪರಿಷ್ಕೃತ ದರವು ಜನವರಿ 1 ರಿಂದಲೇ ಜಾರಿಯಾಗಿದೆ.
ರಾಜ್ಯ ಸರ್ಕಾರವು ಟೋಲ್ ಪರಿಷ್ಕರಣೆ ಬಗ್ಗೆ 2011ರ ಫೆಬ್ರವರಿ 5ರ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು ಎಂದು ನೈಸ್ ಕಂಪೆನಿಯು ಪ್ರಕಟಣೆಯಲ್ಲಿ ತಿಳಿಸಿದೆ.
`ಪ್ರಯಾಣಿಕ ಸ್ನೇಹಿ ನೀತಿಯನ್ನು ಈ ವರ್ಷವು ಮುಂದುವರೆಸಿದ್ದು ಪರಿಷ್ಕೃತ ದರಗಳು ಪ್ರಯಾಣಿಕರಿಗೆ ಹೆಚ್ಚು ಹೊರೆಯಾಗುವುದಿಲ್ಲ~ ಎಂದು ನೈಸ್ ಕಂಪೆನಿಯು ಅಭಿಪ್ರಾಯಪಟ್ಟಿದೆ.