ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ | ಬಿಸಿಲ ತಾಪ: ಮಡಿಕೆ ಖರೀದಿ ಜೋರು

ವೀರೇಶ್‌ ಎನ್.ಮಠಪತಿ
Published 21 ಮಾರ್ಚ್ 2024, 6:05 IST
Last Updated 21 ಮಾರ್ಚ್ 2024, 6:05 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣ, ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಜನರು ನಿತ್ಯ ಹೆಚ್ಚುತ್ತಿರುವ ಪ್ರಖರ ಬಿಸಿಲ ತಾಪಕ್ಕೆ ಬಸವಳಿದಿದ್ದಾರೆ. ಝಳಕ್ಕೆ ಒಂದೆಡೆ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದರೆ, ಮತ್ತೊಂದೆಡೆ ಮನೆಗಳಲ್ಲಿ ತಣ್ಣನೆಯ ನೀರು ಸೇವಿಸುವ ಉದ್ದೇಶದಿಂದ ಸಂತೆಯಲ್ಲಿ ಮಣ್ಣಿನ ಮಡಿಕೆಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಪಟ್ಟಣದಲ್ಲಿ ಪ್ರತಿ ಸೋಮವಾರ, ಸಮೀಪದ ನಿರ್ಣಾದಲ್ಲಿ ಪ್ರತಿ ಶನಿವಾರ, ಮನ್ನಾಎಖ್ಖೇಳಿಯಲ್ಲಿ ಬುಧವಾರ ನಡೆಯುವ ವಾರದ ಸಂತೆಗಳಲ್ಲಿ ವಿವಿಧೆಡೆಯಿಂದ ಆಗಮಿಸಿರುವ ಕುಂಬಾರರು ಬಗೆ ಬಗೆಯ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಜನ ಮಡಿಕೆಗಳ ಖರೀದಿಸುತ್ತಿದ್ದಾರೆ.

ಮಡಿಕೆಗಳಿಗೆ ಭಾರಿ ಬೇಡಿಕೆ ಬಂದಿದ್ದು, ಕುಂಬಾರರ ಕುಟುಂಬಗಳಲ್ಲಿ ಸಂತಸ ತಂದಿದೆ. ಥರ್ಮಸ್‌ ಆಕಾರದ ನೀರಿನ ಬಾಟಲಿಗಳು ಸಹ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗೆ ಇವುಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.

ಮಡಿಕೆಗಳ ಬೆಲೆಯನ್ನು ನೀರು ಸಂಗ್ರಹದ ಸಾಮರ್ಥ್ಯದ ಆಧಾರದ ಮೇಲೆ ಕುಂಬಾರರು ಬೆಲೆ ನಿಗದಿಮಾಡಿದ್ದಾರೆ. ಕನಿಷ್ಠ ₹100ರಿಂದ ಹಿಡಿದು ₹150–200 ರವರೆಗೆ ಮಾರಾಟವಾಗುತ್ತಿವೆ.

‘ಮಡಿಕೆಯಲ್ಲಿ ನೀರು ತಂಪಾಗಿರುತ್ತದೆ. ಅಲ್ಲದೇ, ಮಡಿಕೆಯ ನೀರು ಕುಡಿದರೆ ಬಿಸಿಲ ತಾಪ ಕಡಿಮೆಗೊಳಿಸಿ ಮನಸ್ಸಿಗೆ ನೆಮ್ಮದಿ ಕೊಡಿಸುತ್ತದೆ’ ಎಂದು ಮಡಿಕೆ ಮಾರಾಟಗಾರ ಶಂಕರಪ್ಪ ಹೇಳಿದರು.

‘ಬಾಟಲಿಗಳ ಮಾದರಿಗಳು ₹ 80ರಿಂದ 100ರವರೆಗೂ ಮಾರಾಟವಾಗುತ್ತಿವೆ. ಇವುಗಳಿಂದ ನಮಗೆ ಈ ಬಾರಿ ಹೆಚ್ಚಿನ ಆದಾಯ ಬರುತ್ತಿದೆ
ರೇವಣಸಿದ್ಧ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT