ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿರು ಬಿಸಿಲಲ್ಲಿ ಪಕ್ಷಗಳ ಪ್ರಚಾರ ಬಿರುಸು

ಬಿಜೆಪಿ, ಕಾಂಗ್ರೆಸ್‌, ಎಸ್‌ಯುಸಿಐ–ಸಿ, ಕೆಆರ್‌ಎಸ್, ಬಿಎಸ್‌ಪಿಯಿಂದ ಮತಯಾಚನೆ
Published 17 ಏಪ್ರಿಲ್ 2024, 5:51 IST
Last Updated 17 ಏಪ್ರಿಲ್ 2024, 5:51 IST
ಅಕ್ಷರ ಗಾತ್ರ

ಚಾಮರಾಜನಗರ/ ಕೊಳ್ಳೇಗಾಲ: ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಇನ್ನು ಒಂಬತ್ತು ದಿನಗಳು ಬಾಕಿ ಇರುವಂತೆಯೇ ರಾಜಕೀಯ ಪಕ್ಷಗಳ ಪ್ರಚಾರ ಬಿರುಸು ಪಡೆದಿದೆ. ಬಿರು ಬಿಸಿಲನ್ನು ಲೆಕ್ಕಿಸದೆ, ಅಭ್ಯರ್ಥಿಗಳು, ಪಕ್ಷಗಳ ಮುಖಂಡರು ಮತಯಾಚನೆ ಮಾಡುತ್ತಿದ್ದಾರೆ.

ಎಸ್‌ಯುಸಿಐ–ಸಿ ಪಕ್ಷ: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಸುಮ ಎಸ್‌ ಅವರು  ಕೊಳ್ಳೇಗಾಲ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿದರು. 

ಪಕ್ಷದ ನಾಯಕ ಚಂದ್ರಶೇಖರ ಮೇಟಿ ಮಾತನಾಡಿ, ‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಜನ ವಿರೋಧಿ ಆಡಳಿತ, ಭ್ರಷ್ಟಾಚಾರದ ಅರೋಪ ಲಾಭ ಪಡೆದು‌ ದೇಶ ಜನತೆಗೆ ಒಳ್ಳೆಯದ ಇನ ತರುವುದಾಗಿ, ಕಪ್ಪು ಹಣ ವಾಪಾಸು ತರುವುದು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಬೆಂಬಲ ಬೆಲೆ ಇತ್ಯಾದಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ‌ ನೇತೃತ್ವದ ಕೇಂದ್ರ ‌ಸರ್ಕಾರ, ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳಿಗೆ ಒಳ್ಳೆಯದ ದಿನಗಳನ್ನು ತಂದಿದೆ’ ಎಂದು ದೂರಿದರು. 

‘ಇವತ್ತು ಜನತೆಗೆ ಬೇಕಿರುವುದು ಶಿಕ್ಷಣ, ಆರೋಗ್ಯ, ಉದ್ಯೋಗ ಇತ್ಯಾದಿ ಮೂಲ ಸಮಸ್ಯೆಗಳಿಗೆ ಪರಿಹಾರವೇ ವಿನಾ, ಮಂದಿರ, ಮಸೀದಿ, ಧರ್ಮಗಳ ಚರ್ಚೆಯಲ್ಲ‌. ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು’ ಎಂದು ಟೀಕಿಸಿದರು. 

ಅಭ್ಯರ್ಥಿ ಸುಮ ಮಾತನಾಡಿ, ಜನಸಾಮಾನ್ಯರ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಟ ಬೆಳೆಸುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಎಲ್ಲರೂ ಬೆಂಬಲಿಸಬೇಕು.’ ಎಂದು ಮನವಿ ಮಾಡಿದರು. 

ಪಕ್ಷದ ರಾಜ್ಯ ಸಮಿತಿಯ ಸದಸ್ಯ ಕೆ.ವಿ.ಭಟ್, ಜಿಲ್ಲಾ ಸಮಿತಿಯ ಸದಸ್ಯರಾದ ಸೀಮಾ, ಸಂಧ್ಯಾ, ಹರೀಶ್, ಬಸವರಾಜು, ನೀತು ಮುದ್ದುಕೃಷ್ಣ, ಸುಭಾಷ್, ಚಂದ್ರಕಲಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.

ಕೆಆರ್‌ಎಸ್‌ ಪಕ್ಷದ ಪ್ರಚಾರ: ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಅಭ್ಯರ್ಥಿ ಕಂದಹಳ್ಳಿ ಮಹೇಶ್‌ ಪರವಾಗಿ ಮಂಗಳವಾರ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿದರು. 

ಕೊಳ್ಳೇಗಾಲದ ಮಸೀದಿ ವೃತ್ತ, ಡಾ.ರಾಜ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಬಸ್ ನಿಲ್ದಾಣದ ಬಳಿ, ಮಲ್ಲಯ್ಯ ಸರ್ಕಲ್ ಸೇರಿದಂತೆ ಇತರ ಕಡೆಗಳಲ್ಲಿ ಪ್ರಚಾರ ನಡೆಸಿದರು. ಚಾಮರಾಜನಗರದಲ್ಲಿ ಸಂತೇಮರಹಳ್ಳಿ ವೃತ್ತ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮತಯಾಚನೆ ಮಾಡಿದರು. 

ಬಳಿಕ ಮಾತನಾಡಿದ ಅವರು, ‘ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್‌ ಭ್ರಷ್ಟಾಚಾರದಲ್ಲಿ ಮುಳುಗಿವೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಕೆಆರ್‌ಎಸ್‌ ಪಕ್ಷವನ್ನು ಬೆಂಬಲಿಸಿ. ನಮ್ಮ ಅಭ್ಯರ್ಥಿ ಕಂದಹಳ್ಳಿ ಮಹೇಶ್‌ ಅವರಿಗೆ ಮತ ಹಾಕಿ’ ಎಂದು ಮನವಿ ಮಾಡಿದರು. 

‘ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡುವ ಮೂಲಕ ಜನರನ್ನು ಮೋಸ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷ ಕುಟುಂಬ ರಾಜಕಾರಣ ಮಾಡುವುದರಲ್ಲಿ ಮುಂದಾಗಿದೆ. ಈ ಮೂರು ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ಅಭ್ಯರ್ಥಿ ಕಂದಳ್ಳಿ ಮಹೇಶ್, ಜಿಲ್ಲಾಧ್ಯಕ್ಷ ಗಣೇಶ್, ಉಸ್ತುವಾರಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ಸೈಯದ್ ಸಮೀ, ಕಾರ್ಯದರ್ಶಿ ಮಧು, ಜಯಶಂಕರ್, ದೊಡ್ಡಿಂದುವಾಡಿ ಶಿವಶಂಕರ್ ಇತರರು ಇದ್ದರು.

ಬಿಎಸ್‌ಪಿ: ಬಹುಜನ ಸಮಾಜ ಪಕ್ಷ ಕೂಡ ತನ್ನ ಪ್ರಚಾರವನ್ನು ತೀವ್ರ ಗೊಳಿಸಿದ್ದು,  ಮಂಗಳವಾರ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಗರ, ಮಾಂಬಳ್ಳಿ, ಮದ್ದೂರು ಯರಿಯೂರು, ಯಳಂದೂರು, ಕಂದಹಳ್ಳಿ, ಸಂತೇಮರಹಳ್ಳಿ ಭಾಗದಲ್ಲಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಅವರು ಪ್ರಚಾರ ನಡೆಸಿದರು. 

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್, ಜಿಲ್ಲಾಧ್ಯಕ್ಷ ಎನ್ ನಾಗಯ್ಯ. ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.

ಎಸ್‌ಯುಸಿಐ–ಸಿ ಪಕ್ಷದ ಅಭ್ಯರ್ಥಿ ಸುಮ ಮತ್ತು ಪದಾಧಿಕಾರಿಗಳು ಚಾಮರಾಜನಗರದಲ್ಲಿ ಮಂಗಳವಾರ ಪ್ರಚಾರ ನಡೆಸಿದರು
ಎಸ್‌ಯುಸಿಐ–ಸಿ ಪಕ್ಷದ ಅಭ್ಯರ್ಥಿ ಸುಮ ಮತ್ತು ಪದಾಧಿಕಾರಿಗಳು ಚಾಮರಾಜನಗರದಲ್ಲಿ ಮಂಗಳವಾರ ಪ್ರಚಾರ ನಡೆಸಿದರು
ಬಿಎಸ್‌ಪಿ ಅಭ್ಯರ್ಥಿ ಕೃಷ್ಣಮೂರ್ತಿ ಹಾಗೂ ಪದಾಧಿಕಾರಿಗಳು ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಪ್ರಚಾರ ಕಾರ್ಯ ಕೈಗೊಂಡರು
ಬಿಎಸ್‌ಪಿ ಅಭ್ಯರ್ಥಿ ಕೃಷ್ಣಮೂರ್ತಿ ಹಾಗೂ ಪದಾಧಿಕಾರಿಗಳು ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಪ್ರಚಾರ ಕಾರ್ಯ ಕೈಗೊಂಡರು

ಮುಂದುವರಿದ ಬಿಜೆಪಿ ಕಾಂಗ್ರೆಸ್‌ ಪ್ರಚಾರ

ಕ್ಷೇತ್ರದ ವಿವಿಧ ಕಡೆಗಳಲ್ಲಿ ಬಿಜೆಪಿ ಮುಖಂಡರು ಹಾಗೂ ಕಾಂಗ್ರೆಸ್‌ ಶಾಸಕರು ಹಾಗೂ ಮುಖಂಡರು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಚಾಮರಾಜನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ನಗರ ಮಂಡಲದ ಕಾರ್ಯಕರ್ತರು ಮುಖಂಡರು ನಗರಸಭಾ ಸದಸ್ಯರು ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಪರವಾಗಿ ಮತಯಾಚನೆ ಮಾಡಿದರು. ನಗರದ 1718 ಹಾಗೂ 19ನೇ ವಾರ್ಡುಗಳ ವಿವಿಧ ಬಡಾವಣೆಗಳಿಗೆ ಮುಖಂಡರಾದ ನಿಜಗುಣರಾಜು ಜಿ. ನಾಗಶ್ರೀ ಪ್ರತಾಪ್ ನಗರಸಭಾ ಸದಸ್ಯೆ ಆಶಾನಟರಾಜು ನಗರ ಮಂಡಲದ ಅಧ್ಯಕ್ಷ ಶಿವರಾಜ್ ನೇತೃತ್ವದಲ್ಲಿ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಅಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಚಾಲನೆ ನೀಡಿ ರೈಲ್ವೆ ಬಡಾವಣೆ ನಾಯಕರ ಬೀದಿ ಉಪ್ಪಾರರ ಬೀದಿ ಸೇರಿದಂತೆ ಅನೇಕ ಬಡಾವಣೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು.  ನಗರಸಭೆ ಸದಸ್ಯರಾದ ಸುಧಾ ಲೋಕೇಶ್ವರಿ ರಾಘವೇಂದ್ರ ಕುಮುದಾ ಕೇಶವಮೂರ್ತಿ ಜಿಲ್ಲಾ ಕಾರ್ಯದರ್ಶಿ ನಟರಾಜು ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಕುಮಾರ್‌ ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯ ಜಯಸುಂದರ್ ಎಸ್‌ಟಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಜಿಲ್ಲಾ ಉಪಾಧ್ಯಕ್ಷ ವಿರಾಟ್ ಶಿವುಮ ಇತರರು ಪಾಲ್ಗೊಂಡಿದ್ದರು. ಶ್ರೀ ಶಾಸಕರಿಂದ ಮತಯಾಚನೆ: ಚಾಮರಾಜನಗರ ತಾಲ್ಲೂಕಿನ ದೊಡ್ಡಮೋಳೆ ಹೆಬ್ಬಸೂರು ಹಾಗೂ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 20 ಹೆಚ್ಚು ಗ್ರಾಮಗಳಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಮುಖಂಡರು ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಪರವಾಗಿ ಮತಯಾಚನೆ ಮಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್ ಆರ್.ಮಹದೇವ್ ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ ಮುಖಂಡರಾದ ನಾಗವಳ್ಳಿ ನಾಗಯ್ಯ ರಾಮಸಮುದ್ರ ನಾಗರಾಜು ಹೆಬ್ಬಸೂರು ರಂಗಸ್ವಾಮಿ ಕಾಗಲವಾಡಿ ಚಂದ್ರು ಕೋಡಿಮೋಳೆ ಪ್ರಕಾಶ್ ಅಯ್ಯನಪುರ ಶಿವಕುಮಾರ್ ನಾಗವಳ್ಳಿ ಕಮಾಲ್ ದಡದಹಳ್ಳಿ ರಮೇಶ್ ರೇವಣ್ಣ ಕರಿನಂಜನಪುರ ಸ್ವಾಮಿ ಇತರರು ಇದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT