ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಸ್ವಸಹಾಯ ಸಂಘದ ಸದಸ್ಯರ ₹26 ಲಕ್ಷ ಹಣ ದುರ್ಬಳಕೆ

ಎಸ್‌ಬಿಐ ಕ್ಯಾಷಿಯರ್‌ನಿಂದ ವಂಚನೆ: ಠಾಣೆಗೆ ದೂರು
Published 23 ಮಾರ್ಚ್ 2024, 4:28 IST
Last Updated 23 ಮಾರ್ಚ್ 2024, 4:28 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯ ಕ್ಯಾಷಿಯರ್‌ ಆಗಿದ್ದ ಮನೋರಂಜನ್ ಮುರ್ಮು ಎಂಬುವವರು ಸ್ವಸಹಾಯ ಸಂಘಗಳ ಸದಸ್ಯರು ಸಾಲ ಮರುಪಾವತಿ ಮಾಡಿದ ₹26.15 ಲಕ್ಷದಷ್ಟು ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. 

ಈ ಸಂಬಂಧ ಬ್ಯಾಂಕ್‌ ಮ್ಯಾನೇಜರ್‌ ಅವರು ಶುಕ್ರವಾರ ಸಂತೇಮರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಸ್ವಯಂ ಸೇವಾ ಸಂಸ್ಥೆಯಾಗಿರುವ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಕೆಲವು ಸ್ವ ಸಹಾಯ ಸಂಘಗಳ ಸದಸ್ಯರುಗಳು ಸಾಲ ಪಡೆದಿದ್ದು, ಸಂಘದ ಸದಸ್ಯರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡುತ್ತಿದ್ದರು. ಕ್ಯಾಷಿಯರ್ ಆಗಿದ್ದ ಮನೋರಂಜನ್ ಮುರ್ಮು ಸಾಲ ಮರು ಪಾವತಿ ಮಾಡಿದ್ದ ವಿವಿಧ ಸಂಘದವರಿಂದ ಮೊತ್ತದ ಹಣ ಹಾಗೂ ಚಲನ್‌ಗಳನ್ನು ಅವರ ಖಾತೆಗೆ ಜಮಾ ಮಾಡದೇ ಕೌಂಟರ್ ಚಲನ್‌ ಗ್ರಾಹಕರಿಗೆ ನೀಡಿದ್ದಾರೆ.

ಈ ವಿಚಾರವನ್ನು ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಮುದಾಯ ಅಭಿವೃದ್ಧಿ ಸಮಾಲೋಚಕರು  ಬ್ಯಾಂಕ್‌ ಮ್ಯಾನೇಜರ್‌ ಚನ್ನಕೇಶವ ಅವರ ಗಮನಕ್ಕೆ ತಂದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಮ್ಯಾನೇಜರ್‌ ಗ್ರಾಹಕರ ಖಾತೆಗಳನ್ನು ಪರಿಶೀಲಿಸಿದಾಗ ಕ್ಯಾಷಿಯರ್ ಗ್ರಾಹಕರಿಂದ ₹26,15, 920 ಹಣವನ್ನು ಗ್ರಾಹಕರ ಖಾತೆಗೆ ಜಮೆ ಮಾಡದೆ ತಮ್ಮ ಸ್ವಂತಕ್ಕೆ ಬಳಸಿಕೊಂಡಿರುವುದು ಗೊತ್ತಾಗಿದೆ.

ಈ ಸಂಬಂಧ ವ್ಯವಸ್ಥಾಪಕ ಚನ್ನಕೇಶವ ಅವರು ಠಾಣೆಗೆ ದೂರು ನೀಡಿದ್ದಾರೆ. ಹಲವು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದ ಮನೋರಂಜನ್ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT