ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಸೇತುವೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್

Published 11 ಜೂನ್ 2024, 13:59 IST
Last Updated 11 ಜೂನ್ 2024, 13:59 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ಮುಡಿಗುಂಡದ 90 ವರ್ಷ  ಹಳೆಯ ಸೇತುವೆಯನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಂಗಳವಾರ ವೀಕ್ಷಣೆ ಮಾಡಿದರು.

 ‘ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯ ಈ ಸೇತುವೆ ಬ್ರಿಟಿಷರ ಕಾಲದ ಸೇತುವೆ ಆಗಿದ್ದು, ಸಾಮರ್ಥ್ಯ ಹಾಗೂ ಗುಣಮಟ್ಟವನ್ನು ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಆಧಿಕಾರಿಗಳು ಪರಿಶೀಲನೆ  ಮಾಡಬೇಕು  ಸಾರ್ವಜನಿಕರ ಅನುಕೂಲಕ್ಕಾಗಿ ಪರಿಶೀಲನೆ ನಡೆಸಿದ್ದೇನೆ.  ಒಂದು ವಾರದಲ್ಲಿ  ಇದರ ಸ್ಥಿತಿಗತಿಯನ್ನು ತಜ್ಞರು ಪರಿಶೀಲಿಸಿ ವರದಿ ನೀಡಬೇಕು. ಒಂದು ವೇಳೆ ಸೇತುವೆಯ ಅವಧಿ ಮುಗಿದಿದ್ದರೆ  ಹೊಸ ಸೇತುವೆಗೆ ಅನುಮೋದನೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ನಾನು ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಹೋಗಬೇಕಾದರೆ ಈ ಸೇತುವೆಯ ಮೂಲಕವೇ ಸಾಗುವುದರಿಂದ ವೀಕ್ಷಣೆ ಮಾಡಿದ್ದೇನೆ. ಸಮಸ್ಯೆ ಇದ್ದರೆ ಅದನ್ನು ಕೂಡಲೇ ಬಗೆಹರಿಸುತ್ತೇನೆ ಎಂದು ಹೇಳಿದರು.

ರಸ್ತೆ ಕಾಮಗಾರಿ ವೀಕ್ಷಣೆ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಬೈಪಾಸ್ ರಸ್ತೆಯ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ವೀಕ್ಷಣೆ ಮಾಡಿದರು. ಕಾಮಗಾರಿ ಗುಣಮಟ್ಟದಿಂದ ಹಾಗೂ ಉತ್ತಮವಾಗಿ ಇರಬೇಕು ಈಗಾಗಲೇ ಅನೇಕ ದೂರಗಳು ಬಂದಿವೆ ಹಾಗಾಗಿ ಗುಣಮಟ್ಟ ನೀಡದಿದ್ದರೆ ನಾವು ಒಪ್ಪುವುದಿಲ್ಲ.  ನಿಗದಿತ ಸಮಯದಲ್ಲಿ  ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಗುತ್ತಿಗೆದಾರರಿಗೆ ಹೇಳಿದರು.

ತಹಶೀಲ್ದಾರ್ ಮಂಜುಳಾ, ಲೋಕೋಪಯೋಗಿ ಇಲಾಖೆಯ ಜೆಇ ಸುರೇಂದ್ರ, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT