ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಳಿಗಿರಿರಂಗನಬೆಟ್ಟ | ಸುಳ್ಳು ದಾಖಲೆ ನೀಡಿ ಹುದ್ದೆ: ಕೆಲಸದಿಂದ ವಜಾ

Published 14 ಜನವರಿ 2024, 3:17 IST
Last Updated 14 ಜನವರಿ 2024, 3:17 IST
ಅಕ್ಷರ ಗಾತ್ರ

ಚಾಮರಾಜನಗರ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ದೇವಾಲಯದಲ್ಲಿ ಸುಳ್ಳು ವಂಶವೃಕ್ಷದ ದಾಖಲೆ ನೀಡಿ ಕಟ್ಟಿಗೆ ಹುದ್ದೆ (ಪಂಜು ಹಿಡಿಯುವ) ಪಡೆದಿದ್ದ ಬಿ.ಆರ್.ರಂಗನಾಥ ಅವರನ್ನು ಕೆಲಸದಿಂದ ವಜಾಗೊಳಿಸಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಹೇಶ್‌ ಅವರು ಆದೇಶ ಹೊರಡಿಸಿದ್ದಾರೆ. 

ಕಳೆದ ಡಿ.13ರಂದು ಈ ಆದೇಶ ಹೊರಡಿಸಲಾಗಿದೆ. ರಂಗನಾಥ ಅವರು 2010ರ ಅಕ್ಟೋಬರ್‌ನಲ್ಲಿ ಕಟ್ಟಿಗೆ ಹುದ್ದೆಗೆ ನೇಮಕಗೊಂಡಿದ್ದರು.

ವಂಶಪಾರಂಪರ್ಯವಾಗಿ ಸಿಗುವ ಈ ಹುದ್ದೆಯನ್ನು ರಂಗನಾಥ ಅವರು ಸುಳ್ಳು ವಂಶವೃಕ್ಷ ನೀಡಿ ಪಡೆದಿದ್ದಾರೆ ಎಂದು ರತ್ನಮ್ಮ ಎಂಬುವವರು ದೂರು ನೀಡಿದ್ದರು. ಜಿಲ್ಲಾಡಳಿತ ಮಾತ್ರವಲ್ಲದೇ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. 

ರಂಗನಾಥ ಅವರು ಸುಳ್ಳು ವಂಶವೃಕ್ಷ ನೀಡಿರುವುದು ತನಿಖೆಯಿಂದ ಸಾಬೀತಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ನೀಡಿದ ವರದಿಯ ಆಧಾರದಲ್ಲಿ ಆಡಳಿತಾಧಿಕಾರಿಯವರು ರಂಗನಾಥ ಅವರನ್ನು ಸೇವೆಯಿಂದ ವಜಾ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT