ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿಯಲ್ಲಿ ಕನ್ನಡ ಬೆಳವಣಿಗೆ ಅದ್ಯತೆ ನೀಡೋಣ: ಗಣೇಶ್‌ ಪ್ರಸಾದ್

ಹರವೆ ಶ್ರೀ ಚನ್ನಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವ
Published 30 ನವೆಂಬರ್ 2023, 15:46 IST
Last Updated 30 ನವೆಂಬರ್ 2023, 15:46 IST
ಅಕ್ಷರ ಗಾತ್ರ

ಚಾಮರಾಜನಗರ: ‘ಗಡಿ ಜಿಲ್ಲೆಯ ಕನ್ನಡಿಗರಾದ ನಾವು ಕನ್ನಡತನವನ್ನು ಬಿಟ್ಟು ಕೊಡದೆ ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ವರ್ಷಪೂರ್ತಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡುವ ಜೊತೆಗೆ ಕನ್ನಡಿಗೆ ಪ್ರಥಮ ಆದ್ಯತೆ ನಮ್ಮದಾಗಬೇಕು’ ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಗುರುವಾರ ತಿಳಿಸಿದರು.

ತಾಲ್ಲೂಕಿನ ಹರವೆ ಶ್ರೀ ಚನ್ನಬಸವೇಶ್ವರ ವಿದ್ಯಾ ಸಂಸ್ತೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನೆಯೇ ಮೊದಲ ಪಾಠ ಶಾಲೆ ಎಂಬಂತೆ, ಮಕ್ಕಳಲ್ಲಿ ಕನ್ನಡದ ಬಗ್ಗೆ ಪೋಷಕರು ಹೆಚ್ಚಿನ ಆಸಕ್ತಿ ಮೂಡಿಸಬೇಕು. ನಾವು ಯಾವುದೇ ಭಾಷೆಯನ್ನು ಕಲಿಯೋಣ. ಆದರೆ, ನಮ್ಮ ಹಾಡು ಭಾಷೆ ಕನ್ನಡವಾಗಿರಲಿ. ತಮಿಳುನಾಡು ಹಾಗೂ ಕೇರಳ ಗಡಿಯಲ್ಲಿರುವ ನಮಗೆ ಪರ ಭಾಷಿಕರ ಆಕರ್ಷಣೆ ಹೆಚ್ಚು. ಈ ಹಂತದಲ್ಲಿಯೂ ನಮ್ಮ ಕನ್ನಡವನ್ನು ಉಳಿಸುವ ಬೆಳೆಸುವ ಬಹು ದೊಡ್ಡ ಜವಾಬ್ದಾರಿ ನಮ್ಮದಾಗಿದೆ’ ಎಂದರು. 

‘ವಿದ್ಯಾರ್ಥಿಗಳು ಇತರೆ ಭಾಷೆಗಳನ್ನು ವ್ಯವಹಾರ ಹಾಗೂ ಕಲಿಕೆಗಾಗಿ ಸಂವಹನ, ಜ್ಞಾನ ವಿಕಸನಕ್ಕಾಗಿ ಕಲಿಯಬೇಕು. ಆದರೆ, ನಮ್ಮ ಮಾತೃಭಾಷೆ ಯಾವಾಗಲೂ ಕನ್ನಡವಾಗಿರಬೇಕು’ ಎಂದರು. 

ವಿದ್ಯಾಸಂಸ್ಥೆಯ ಅಧ್ಯಕ್ಷ ಸರ್ಪಭೂಷಣ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ಬೆಳೆಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್‌ ಹಾಗೂ ಇತರೆ ಭಾಷೆಗಳ ವ್ಯಾಮೋಹದಿಂದ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತದೆ. ನಾವೆಲ್ಲರೂ ಯಾವುದೇ ಪದವಿಗೆ ಹೋದರೂ ಕನ್ನಡ ಮಾತನಾಡುವ, ಬರೆಯುವ ಹಾಗು ಕನ್ನಡದಲ್ಲಿ ಹೆಚ್ಚು ವ್ಯವಹರಿಸುವುದನ್ನು ರೂಡಿಸಿಕೊಳ್ಳಬೇಕು. ಮಾತೃ ಭಾಷೆ ಕನ್ನಡವಾಗಬೇಕು’ ಎಂದು ತಿಳಿಸಿದರು.

ಮಲೆಯೂರು ಕನಕಗಿರಿ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಭವನಕೀರ್ತಿ ಭಟ್ಟಾರಕ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಬ್ಬಹಳ್ಳಿ ಮಹೇಶ್, ಶಿಕ್ಷಣ ಇಲಾಖೆ ಜಿಲ್ಲಾ ಉಪ ಯೋಜನಾ ಸಮಾನ್ವಾಧಿಕಾರಿ ಲಕ್ಷ್ಮೀಪತಿ, ಸಂಸ್ಥೆಯ ಕಾರ್ಯದರ್ಶಿ ಗಿರೀಶ್, ಮುಖ್ಯ ಶಿಕ್ಷಕ ರಾಜು, ಸಹ ಶಿಕ್ಷಕ ಲೋಕೇಶ್, ಹೀರಿಬೇಗೂರು ಗುರುಸ್ವಾಮಿ, ಗಿರೀಶ್ ಹಾಗೂ ಪೋಷಕರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT