ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ | ಲಾರಿ ಮಗುಚಿ 24 ಕುರಿಗಳು ಸಾವು

Published 14 ಡಿಸೆಂಬರ್ 2023, 7:41 IST
Last Updated 14 ಡಿಸೆಂಬರ್ 2023, 7:41 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಮುಖ್ಯ ರಸ್ತೆಯಲ್ಲಿ ಕುರಿಗಳನ್ನು ತುಂಬಿಕೊಂಡು ಹೋಗುತ್ತಿದ್ದ  ಲಾರಿ ಪಲ್ಟಿಯಾಗಿ 24 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದೆ.

ವಿಜಯಪುರದಿಂದ ತಮಿಳುನಾಡಿನ ಕೊಯಮುತ್ತೂರಿಗೆ ಕುರಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಇದಾಗಿದ್ದು,  ಬೆಳಿಗ್ಗೆ  ವಾಹನ ಸತ್ತೇಗಾಲ ಗ್ರಾಮದ ತಿರುವಿನಲ್ಲಿ ವೇಗವಾಗಿ ಸಾಗಿದಾಗ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ವಾಹನದಲ್ಲಿ 85 ಕುರಿಗಳನ್ನು ಸಾಗಣೆ ಮಾಡುತ್ತಿದ್ದು 24 ಕುರಿಗಳು ಮೃತಪಟ್ಟಿವೆ. ವಾಹನದಲ್ಲಿದ್ದ ಮೂವರು ಅಪಾಯ ಇಲ್ಲದೆ ಪಾರಾಗಿದ್ದಾರೆ.

ಪೊಲೀಸರು ಮಪ್ರಕರಣ ದಾಖಲಿಸಿದ್ದು, ಮೃತ ಕುರಿಗಳನ್ನು ಪಶು ವೈದ್ಯ ಡಾ.ಶಿವಕುಮಾರ್ ದ ಮರಣೋತ್ತರ ಪರೀಕ್ಷೆ ನಡೆಸಿ , ವಾರಾಸುದಾರರಿಗೆ ಹಸ್ತಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT