ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ: ಎಚ್ಎನ್ ಪ್ರಶಸ್ತಿಗೆ ಮನೋರಕ್ಕಿತ ಬಂತೇಜಿ ಆಯ್ಕೆ

ಪರಿಷತ್ ರಾಯಚೂರು ಸಮ್ಮೇಳನಕ್ಕೆ ಉಚಿತ ಬಸ್: ಮಹಾದೇವ
Published 18 ಡಿಸೆಂಬರ್ 2023, 13:41 IST
Last Updated 18 ಡಿಸೆಂಬರ್ 2023, 13:41 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ (ಕರಾವೈಸಂಪ) ನೀಡುವ 2023ನೇ ಸಾಲಿನ ಎಚ್ಎನ್ ರಾಜ್ಯ ಪ್ರಶಸ್ತಿಗೆ ಆಧ್ಯಾತ್ಮಿಕ ಗುರು, ಚಿಂತಕ ಜೇತವನ ವಿಹಾರದ ಮನೋರಕ್ಕಿತ ಬಂತೇಜಿ ಆಯ್ಕೆಯಾಗಿದ್ದಾರೆ.

‘ರಾಯಚೂರು ಲಿಂಗಸಗೂರಿನಲ್ಲಿ ಅ. 30ರಂದು ನಡೆಯುವ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ’ ಎಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮುಡಿಗುಂಡ ಮಹಾದೇವ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಪ್ರಶಸ್ತಿ ಪುರಷ್ಕೃತರನ್ನು ಸಮ್ಮೇಳನಕ್ಕೆ ಆಹ್ವಾನಿಸಿ ಮಾತನಾಡಿದರು.

‘ರಾಜ್ಯ ಸಮ್ಮೇಳನ ಇದೇ 29 ಮತ್ತು 30ರಂದು ರಾಯಚೂರಿನಲ್ಲಿ ಸಮಾವೇಶಗೊಳ್ಳಲಿದೆ. ಜಿಲ್ಲೆಯ 100 ವಿಜ್ಞಾನ ಆಸಕ್ತರು, ಶಿಕ್ಷಕರು ಮತ್ತು ಚಿಂತಕರು ಸಮ್ಮೇಳನಕ್ಕೆ ತೆರಳುತ್ತಿದ್ದಾರೆ. ಉಚಿತ ಬ್ಯಾಗ್ ಮತ್ತು ಮತ್ತಿತರ ಪರಿಕರ ಪಡೆಯಲು ಇಚ್ಚಿಸುವವರು ಪರಿಷತ್ ನಿಗಧಿ ಪಡಿಸಿರುವ ಹಣವನ್ನು ಭರಿಸಬೇಕು. ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡವರಿಗೆ ಕೊಠಡಿ ಕಾಯ್ದಿರಿಸುವಿಕೆ ಮತ್ತು ಭೋಜನ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ಹೇಳಿದರು.

ಭಾರತೀಯ ಬೌದ್ಧ ಮಹಾಸಭೆಯ ಅಧ್ಯಕ್ಷರಾದ ರಾಚಪ್ಪಾಜಿ, ತಾಲ್ಲೂಕು ಅಧ್ಯಕ್ಷ ಸಿದ್ದರಾಜು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT