ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಮೋಹನ್‌ ಕಡೆಗಣನೆ; 17ಕ್ಕೆ ಸಭೆ

ಸ್ನೇಹಬಳಗದ ಆರೋಪ, ರಾಜ್ಯ ಮಟ್ಟದ ಸ್ಥಾನಮಾನ ನೀಡಲು ಆಗ್ರಹ
Published 14 ಏಪ್ರಿಲ್ 2024, 4:46 IST
Last Updated 14 ಏಪ್ರಿಲ್ 2024, 4:46 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಾ.ಎನ್‌.ಮೋಹನ್‌ ಅವರನ್ನು ಬಿಜೆಪಿ ಮುಖಂಡರು ಕಡೆಗಣಿಸುತ್ತಿದ್ದಾರೆ ಎಂದು ಡಾ.ಎನ್‌.ಎಸ್‌.ಮೋಹನ್‌ ಸ್ನೇಹ ಬಳಗ ಆರೋಪಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಸ್ನೇಹಬಳಗದ ಅಧ್ಯಕ್ಷ ಕೆ.ಆರ್.ಲೋಕೇಶ್, ‘ಡಾ. ಮೋಹನ್ ಅವರು ರಾಜಕೀಯ ಮುಖಂಡರ ಜತೆ ನಿರಂತರವಾಗಿ ಸಂಪರ್ಕದಲ್ಲಿರದೆ, ನೇರವಾಗಿ ಸಾರ್ವಜನಿಕರ ಜತೆ ಸಂಪರ್ಕ ಬೆಳೆಸಿದ್ದರು. ಇದರಿಂದಾಗಿ ಕೊನೆಗಳಿಗೆಯಲ್ಲಿ ಅವರಿಗೆ ಟಿಕೆಟ್‌ ತಪ್ಪಿದೆ. ಅಂದಿನಿಂದ ಪಕ್ಷದ ಜಿಲ್ಲಾಧ್ಯಕ್ಷರಾಗಲಿ, ವರಿಷ್ಠರಾಗಲಿ, ಮುಖಂಡರಾಗಲಿ ಈವರೆಗೂ ಅವರನ್ನು ಸಂಪರ್ಕ ಮಾಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವಂತೆ ಕರೆದಿಲ್ಲ’ ಎಂದು ದೂರಿದರು. 

ಚುನಾವಣೆಯಲ್ಲಿ ಟಿಕೆಟ್‌ ಸಿಗಲಿದೆ ಎಂಬ ನಿರೀಕ್ಷೆಯಿಂದ ಸರ್ಕಾರಿ ಹುದ್ದೆಗೂ ಅವರು ರಾಜೀನಾಮೆ ನೀಡಿದ್ದರು. ಆದರೆ, ಬಾಲರಾಜು ಅವರಿಗೆ ಟಿಕೆಟ್‌ ಘೋಷಿಸಿದ ಬಳಿಕ ಮೋಹನ್‌ ಅವರನ್ನು ಮುಖಂಡರು ನಿರ್ಲಕ್ಷಿಸುತ್ತಿದ್ದಾರೆ. ಪಕ್ಷದ ನಡೆ ಖಂಡಿಸಿ ಮುಂದೆ ಕೈಗೊಳ್ಳಬೇಕಾದ ನಿರ್ಧಾರದ ಬಗ್ಗೆ ಚರ್ಚಿಸಲು ಇದೇ 17ರಂದು ನಂಜನಗೂಡಿನಲ್ಲಿ ಬಳಗದಿಂದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಚರ್ಚಿಸುವ ತೆಗೆದುಕೊಳ್ಳಲಾಗುವ ತೀರ್ಮಾನಗಳಿಗೆ ನಾವು ಬದ್ಧರಾಗಿತ್ತೇವೆ’ ಎಂದರು. 

‘ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ಅವರಿಗೆ ಟಿಕೆಟ್‌ ಸಿಗದಿದ್ದರೂ, ಬಳಿಕ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಅದೇ ರೀತಿ ಬಿಜೆಪಿ ವರಿಷ್ಠರು ಕೂಡ ಮೋಹನ್‌ ಅವರಿಗೆ ರಾಜ್ಯ ಮಟ್ಟದ ಉನ್ನತ ಸ್ಥಾನಮಾನ ನೀಡಬೇಕು’ ಎಂದು ಲೋಕೇಶ್‌ ಆಗ್ರಹಿಸಿದರು. 

ಸ್ನೇಹ ಬಳಗದ ಬಸವರಾಜಪ್ಪ, ಅವಿನಾಶ್, ಕೃಷ್ಣಪ್ಪ, ಗುಣಶೇಖರ್, ಇಕ್ಕಡಳ್ಳಿ ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT