ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ರಂಗನಾಥಸ್ವಾಮಿ ತೆಪ್ಪೋತ್ಸವ ಸಡಗರ

ಜಲಾವರಗಳಲ್ಲಿ ನೀರಿನ ಕೊರತೆ: ಸಾಂಪ್ರದಾಯಿಕ ಆಚರಣೆ
Published 23 ಮೇ 2024, 14:24 IST
Last Updated 23 ಮೇ 2024, 14:24 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ ಗುರುವಾರ ರಂಗನಾಥಸ್ವಾಮಿ ತೆಪ್ಪೋತ್ಸವ ಭಕ್ತರ ಸಡಗರ ಸಂಭ್ರಮದ ನಡುವೆ ಜರುಗಿತು.

ಸಂಜೆ ಉತ್ಸವ ಮೂರ್ತಿಯನ್ನು ಬಗೆಬಗೆ ಹೂ ಹಾರಗಳಿಂದ ಸಿಂಗರಿಸಿ, ಗಂಧ, ಕುಂಕುಮಾರ್ಚನೆ ನೆರವೇರಿಸಿ, ತೆಪ್ಪೋತ್ಸವಕ್ಕೆ ಆಗಮಿಕರು ಚಾಲನೆ ನೀಡಿದರು. ಈ ಸಮಯದಲ್ಲಿ ಆಗಮಿಸಿದ್ದ ಭಕ್ತರು ಮತ್ತು ಸೋಲಿಗರು ರಂಗನಾಥನ ಗುಣಗಾನ ಮಾಡಿದರು. ದಾಸರು ಶಂಖ, ಜಾಗಟೆ ಬಡಿದು ಗೋವಿಂದನನ್ನು ಸ್ಮರಿಸಿದರು. ಹರಕೆ ಹೊತ್ತವರು ಕರ್ಪೂರ ಹಾಗೂ ಊದಿನಕಡ್ಡಿ ಬೆಳಗಿಸಿ ಬನದ ತುಂಬ ಸುವಾಸನೆ ತುಂಬಿದರು.

ಸಂಜೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಈ ಬಾರಿ ಕೆರೆಗಳಲ್ಲಿ ನೀರು ಕುಸಿದಿದ್ದು, ತಳ ಮುಟ್ಟಿದೆ. ಹೀಗಾಗಿ, ಸಾಂಪ್ರದಾಯಿಕ ಆಚರಣೆಗೆ ಪೂಜೆ ಪುನಸ್ಕಾರ ಮಿತಿಗೊಂಡಿದೆ ಎಂದು ದೇವಾಲಯದ ಪಾರುಪತ್ತೆಗಾರ ರಾಜು ಹೇಳಿದರು.

ದೇವಾಲಯ ಸಿಬ್ಬಂದಿ, ಅರ್ಚಕರು ಮತ್ತು ಆಡಳಿತಾಧಿಕಾರಿ ವೈ.ಎನ್.ಮೋಹನ್ ಕುಮಾರ್, ಸೋಲಿಗ ಮುಖಂಡ ಬೊಮ್ಮಯ್ಯ, ಶೇಷಾದ್ರಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT