ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ

Published 30 ಮೇ 2024, 5:32 IST
Last Updated 30 ಮೇ 2024, 5:32 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಬುಧವಾರ ಶಾಲೆಗಳು ಆರಂಭಗೊಂಡಿವೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಇತರ ಸಿಬ್ಬಂದಿ ಹಾಜರಾಗಿದ್ದಾರೆ. ತರಗತಿಗಳು ಶುಕ್ರವಾರದಿಂದ (ಮೇ 31) ಆರಂಭವಾಗಲಿರುವುದರಿಂದ ಮಕ್ಕಳ ಸಂಖ್ಯೆ ಕಡಿಮೆ ಇದ್ದವು. 

ಖಾಸಗಿ ಶಾಲೆಗಳೂ ಬುಧವಾರದಿಂದ ಆರಂಭವಾಗಿವೆ. ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ಮಕ್ಕಳನ್ನು ಆಡಳಿತ ಮಂಡಳಿ ಮತ್ತು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು. ಆರತಿ ಬೆಳಗಿ, ಪುಷ್ಪ ವೃಷ್ಟಿ ಮಾಡಿ ಸ್ವಾಗತಿಸಿದರು. ಮಕ್ಕಳು ಉತ್ಸಾಹದಿಂದಲೇ ಶಾಲೆಗೆ ತೆರಳಿದರು. 

ಪ್ರಾರಂಭೋತ್ಸವಕ್ಕೆ ಸಿದ್ಧತೆ: ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಶುಕ್ರವಾರ ನಡೆಯಲಿರುವ ಪ್ರಾರಂಭೋತ್ಸವಕ್ಕೆ ಶಿಕ್ಷಕರು ಸಿದ್ಧತೆ ಮಾಡಿದರು. ಕೆಲವು ಮಕ್ಕಳು ಕೂಡ ಶಾಲೆಗೆ ಬಂದಿದ್ದರು. ಶಾಲೆ. ಆವರಣ ಸ್ವಚ್ಛತಾ ಚಟುವಟಿಕೆಗಳಲ್ಲಿ ಅವರು ಕೂಡ ಕೈ ಜೋಡಿಸಿದರು. 

ತರಗತಿ ಆರಂಭವಾಗುವ ಮೊದಲ ದಿನ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕಗಳನ್ನು ವಿತರಿಸಲು ಶಿಕ್ಷಕರು ಸಿದ್ಧತೆ ನಡೆಸಿದರು. 

ಚಾಮರಾಜನಗರದ ಪಿಡಬ್ಲ್ಯುಡಿ ಕಾಲೊನಿಯ ಸರ್ಕಾರಿ ಶಾಲೆಗೆ ತಾಯಿಯೊಂದಿಗೆ ಹೆಜ್ಜೆಹಾಕಿದ ಮಕ್ಕಳು
ಚಾಮರಾಜನಗರದ ಪಿಡಬ್ಲ್ಯುಡಿ ಕಾಲೊನಿಯ ಸರ್ಕಾರಿ ಶಾಲೆಗೆ ತಾಯಿಯೊಂದಿಗೆ ಹೆಜ್ಜೆಹಾಕಿದ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT