ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸ್ತೂರು: ಬಾರ್‌ಗೆ ನುಗ್ಗಿದರೂ ಮದ್ಯ ಮುಟ್ಟದ ಕಳ್ಳರು!

Published 10 ಮಾರ್ಚ್ 2024, 14:04 IST
Last Updated 10 ಮಾರ್ಚ್ 2024, 14:04 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಹೊರ ವಲಯದ ಎಂಎಸ್ಐಎಲ್ ಬಾರ್‌ಗೆ ಶನಿವಾರ ತಡರಾತ್ರಿ ನುಗ್ಗಿದ ಕಳ್ಳರು  ₹65 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಆದರೆ ಮದ್ಯದ ಬಾಟಲ್ ಮುಟ್ಟಿಲ್ಲ.

ಕಳ್ಳರು ಬಾಗಿಲನ್ನು ತೆರೆಯಲು ನಕಲಿ ಕೀಲಿಕೈ ಬಳಸಿರುವ ಸಾಧ್ಯತೆ ಇದೆ. ಸಿಸಿ ಟಿವಿ ಕ್ಯಾಮೆರಾ ಡಾಟಾವನ್ನು ಕಳಚಿಕೊಂಡು ಹೋಗಿದ್ದಾರೆ. ಬ್ಯಾಂಕ್‌ ರಜೆ ಇದ್ದ ಕಾರಣ ಮದ್ಯ ಮಾರಾಟದ ಹಣವನ್ನು ಅಂಗಡಿಯಲ್ಲಿ ಇಟ್ಟು ಮಾಲೀಕರು ತೆರಳಿದ್ದರು  ಎಂಬ ಮಾಹಿತಿ ಲಭಿಸಿದೆ. ಪಟ್ಟಣ ಠಾಣೆ ಪೊಲೀಸರು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT