ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆ, ಸಾಹಿತ್ಯ ನಮ್ಮನ್ನು ಬೆಳೆಸುತ್ತದೆ: ದೀಪಕ್‌

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ
Published 28 ಮಾರ್ಚ್ 2024, 4:27 IST
Last Updated 28 ಮಾರ್ಚ್ 2024, 4:27 IST
ಅಕ್ಷರ ಗಾತ್ರ

ಚಾಮರಾಜನಗರ: ರಂಗಾಸಕ್ತರು, ಕಲಾವಿದರು ಸೇರಿದಂತೆ ಎಲ್ಲರೂ ರಂಗ ಚಟುವಟಿಕೆಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಾಗ ಮಾತ್ರ ರಂಗಭೂಮಿ ಎತ್ತರಕ್ಕೆ ಬೆಳಯಲು ಸಾಧ್ಯ ಎಂದು ರಂಗಕಲಾವಿದ, ಮೈಸೂರಿನ ಸಂಚಲನ ತಂಡದ ಸಂಚಾಲಕ ದೀಪಕ್‌ ಬುಧವಾರ ಹೇಳಿದರು. 

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಮೈಸೂರಿನ ಸಂಚಲನ ತಂಡದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ನಾಟಕಕಾರ ಜಾನ್ ಪೋಸ್ಸೇ ಅವರ ರಂಗ ಸಂದೇಶ ಓದಿದ ಅವರು, ‘ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯಾರು ತೊಡಗಿಸಿಕೊಳ್ಳುತ್ತಾರೊ ಅವರು ಮನುಷ್ಯನನ್ನು ಗೌರವಿಸುತ್ತಾರೆ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮನ್ನು ಬೇರೆಲ್ಲಿಗೂ ತೆಗೆದುಕೊಂಡು ಹೋಗುತ್ತದೆ. ನಮ್ಮನ್ನು ಬೆಳೆಸುತ್ತದೆ’ ಎಂದರು. 

‘ಸಮೂಹ ಮಾಧ್ಯಮ, ಬಣ್ಣ ಹಚ್ಚುವವರು, ಚಿತ್ರ ಬರೆಯುವವರು ಎಲ್ಲರನ್ನು ಒಳಗೊಂಡಂತಹ ಕ್ಷೇತ್ರವೇ ರಂಗಭೂಮಿ. ಇಡೀ ವಿಶ್ವವೇ ಇವತ್ತು ರಂಗಭೂಮಿ ದಿನ ಆಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಜಾನಪದ ನಾಟಕದ ಬಗ್ಗೆ ಇಲ್ಲಿನ ಜನರಿಗೆ ತರಬೇತಿ ಕೊಡುತ್ತೇನೆ’ ಎಂದರು. 

ನಟಿ, ರಂಗಭೂಮಿ ಕಲಾವಿದೆ ಅಖಿಲಾ ತಾಂಡೂರ್ ಮಾತನಾಡಿ, ‘ಭಾಷೆ, ಬಣ್ಣ ಎಲ್ಲ ಬೇರೆ ಬೇರೆಯಾಗಿದ್ದರೂ ನಾವೆಲ್ಲ ಪ್ರೀತಿಯಿಂದ ಇರಬೇಕು ಎಂಬುದು ರಂಗಭೂಮಿಯ ಸಂದೇಶ. ರಂಗಭೂಮಿಯಲ್ಲಿ ತೊಡಗಿಸಿಕೊಂಡರೆ ಎಲ್ಲ ರೀತಿಯ ಕಲೆಗಳನ್ನು ಕಲಿಯಲು ಸಾಧ್ಯ. ರಂಗಭೂಮಿಗೆ ಯಾವುದೇ ನಿರ್ಬಂಧ ಇಲ್ಲ’ ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲ ನೀಲಕಂಠಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಂ.ಶಿವಸ್ವಾಮಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT