ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರಿಗೆ ದುಬಾರಿಯಾದ ತರಕಾರಿ

ಬರ ಪರಿಸ್ಥಿತಿ; ಇಳುವರಿ ಕಡಿಮೆ, ಮಾರುಕಟ್ಟೆಗೆ ತಗ್ಗಿದ ಆವಕ
Published 29 ಡಿಸೆಂಬರ್ 2023, 6:48 IST
Last Updated 29 ಡಿಸೆಂಬರ್ 2023, 6:48 IST
ಅಕ್ಷರ ಗಾತ್ರ

ಕಡೂರು: ಬಿಸಿಲಿನ ಝಳ ಹೆಚ್ಚುತ್ತಿರುವ ಬೆನ್ನಲ್ಲೇ ತರಕಾರಿ ದರವೂ ಏರುತ್ತಿದ್ದು, ಗ್ರಾಹಕರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಸದ್ಯ ಯಾವುದೇ ತರಕಾರಿಯಾದರೂ ಕೆ.ಜಿಗೆ ₹60 ದರಕ್ಕಿಂತ ಕಡಿಮೆಯಿಲ್ಲದಂತೆ ಬಿಕರಿಯಾಗುತ್ತಿದೆ.

ಕೊಳವೆ ಬಾವಿ ಇರುವ ರೈತರು ಬೇಸಿಗೆಯಲ್ಲಿ ಸಣ್ಣ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ಶೇ60ರಷ್ಟು ಮಂದಿ ಬೆಂಡೆ ಮತ್ತು ಟೊಮೆಟೊ ಬೆಳೆಯುತ್ತಾರೆ. ತರಕಾರಿ ಸಗಟು ಮಾರಾಟಗಾರರು ಭದ್ರಾವತಿ, ಶಿವಮೊಗ್ಗ, ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗಿ ಮಾರುತ್ತಾರೆ. ಕೆಲವರು ಕಡೂರು ಎಪಿಎಂಸಿಯಲ್ಲಿ ಮಾರಾಟ ಮಾಡುತ್ತಾರೆ.

ಬರ ಪರಿಸ್ಥಿತಿ ಇರುವುದರಿಂದ ತರಕಾರಿ ದರ ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದೆ. ಸದ್ಯ ಟೊಮೆಟೊ ದರ ಮಾತ್ರ ತುಸು ಕಡಿಮೆ ಇದೆ. ಎಪಿಎಂಸಿಯಲ್ಲಿ 15 ಕೆ.ಜಿ ತೂಕದ ಒಂದು ಬುಟ್ಟಿ ಟೊಮೆಟೊ ₹400 ದರಕ್ಕೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ  ಒಂದು ಕೆಜಿ ಟೊಮೆಟೊಗೆ ₹30 ದರ ಇದೆ. ಹುಳಿ ಟೊಮೆಟೊ ಬೆಲೆ ಕೆ.ಜಿಗೆ ₹35ರವರೆಗೆ ಇದೆ.

ಸಗಟು ಮಾರುಕಟ್ಟೆಯಲ್ಲಿ ಬೀನ್ಸ್, ಗೆಡ್ಡೆಕೋಸು, ಬಟಾಣಿ, ಬೆಂಡೆ, ಚವಳಿಕಾಯಿ, ಹಾಗಲ ಕಾಯಿ ಕ್ವಿಂಟ್‌ಗೆ ₹5 ರಿಂದ ₹6 ಸಾವಿರಕ್ಕೆ ಮಾರಾಟವಾಗುತ್ತಿದೆ. ಮೆಣಸಿನಕಾಯಿ, ತೊಂಡೆ ಮತ್ತು ಕ್ಯಾರೆಟ್‌ ಕ್ವಿಂಟಲ್‌ಗೆ ₹ 4 ರಿಂದ ₹5ಸಾವಿರ ದರ ಇದೆ. ನುಗ್ಗೆಕಾಯಿ ಮತ್ತು ಶುಂಠಿ ಸಗಟು ದರದಲ್ಲಿ ಒಂದು ಕೆಜಿಗೆ ₹100, ಚಿಲ್ಲರೆಯಾಗಿ ₹110ಕ್ಕೆ ಸಿಗುತ್ತಿದೆ. ಸದ್ಯ ಕಡಿಮೆ ದರದಲ್ಲಿ ಸಿಗುತ್ತಿರುವ ತರಕಾರಿ ಸೋರೆಕಾಯಿ ಮಾತ್ರ. ಒಂದು ಕೆ.ಜಿಗೆ ₹11 ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT