ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ | ಮರಕ್ಕೆ ಕಟ್ಟಿ ಹಲ್ಲೆ: ಆರೋಪಿಗಳ ಬಂಧನ

Published 8 ಫೆಬ್ರುವರಿ 2024, 16:32 IST
Last Updated 8 ಫೆಬ್ರುವರಿ 2024, 16:32 IST
ಅಕ್ಷರ ಗಾತ್ರ

ಕೊಪ್ಪ: ಸೋಮ್ಲಾಪುರ ಕಾಡಿನಲ್ಲಿ ಈಚೆಗೆ ವ್ಯಕ್ತಿ ಒಬ್ಬರನ್ನು ಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೆಲಸದ ಹಣ ಕೇಳಿದ್ದಕ್ಕೆ ಎನ್.ಆರ್.ಪುರ ತಾಲ್ಲೂಕು ಮೇಲ್ಪಾಲ್‌ನ ಕಾರ್ಮಿಕ ಸತೀಶ್ ಎಂಬುವರ ಮೇಲೆ ಆರೋಪಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಕೊಪ್ಪದ ಮಹೇಶ್, ಶಿರಿಲ್, ವಿಠಲ್, ಸುನಿಲ್ ಕಟ್ಟೆಹಕ್ಲು, ಮಂಜು ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು. ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT