ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾ ಏಷ್ಯನ್‌ಗೇಮ್ಸ್‌ಗೆ ರಕ್ಷಿತಾ:ಅಂಗವೈಕಲ್ಯ ಮೆಟ್ಟಿ ನಿಂತ ಮಲೆನಾಡ ಕ್ರೀಡಾಪಟು

ಅಂಗವೈಕಲ್ಯ ಮೆಟ್ಟಿ ನಿಂತ ಮಲೆನಾಡಿನ ಕ್ರೀಡಾಪಟು
Last Updated 20 ಡಿಸೆಂಬರ್ 2022, 6:06 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಗುಡ್ನಳ್ಳಿಯ ರಕ್ಷಿತಾ ರಾಜುಅಂಗವೈಕಲ್ಯವನ್ನು ಮೆಟ್ಟಿ ನಿಂತು ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದು, 2023ರಲ್ಲಿ ಚೀನಾದಲ್ಲಿ ನಡೆಯುವ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ.

ಗುಡ್ನಳ್ಳಿಯ ರಾಜು ಹಾಗೂ ಗೀತಾ ದಂಪತಿ ಪುತ್ರಿ ರಕ್ಷಿತಾ, ತಂದೆ– ತಾಯಿಯನ್ನು ಕಳೆದುಕೊಂಡ ಬಳಿಕ ಅಜ್ಜಿ ಲಲಿತಾ ಆಶ್ರಯದಲ್ಲಿ ಬೆಳೆದರು. ಕಲ್ಲಕ್ಕಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಬಳಿಕ, ಕೆಂಪನಹಳ್ಳಿಯ ಡಾ.ಜೆ.ಪಿ.ಕೃಷ್ಣೇಗೌಡರ ಆಶಾಕಿರಣ ಅಂಧತ್ವ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು.

ಅಜ್ಜಿಯ ಜೊತೆ ಶಿಕ್ಷಕಿಯರಾದ ಸಿಂತಿಯಾ ಪಾಯಸ್‌, ಮಾರ್ಗರೇಟ್ ಡಿಸೋಜ, ದೈಹಿಕ ಶಿಕ್ಷಣ ಶಿಕ್ಷಕ ಪಿ.ಮಂಜು ಪ್ರೋತ್ಸಾಹ ನೀಡಿ ಬೆಳೆಸಿದರು.

ಡಿ.14ರಿಂದ 16 ರವರೆಗೆ ದೆಹಲಿಯಲ್ಲಿ ನಡೆದ 22ನೇ ರಾಷ್ಟ್ರ ಮಟ್ಟದ ಪ್ಯಾರಾ ಒಲಂಪಿಕ್ಸ್ ಅಥ್ಲೆಟಿಕ್ ವಿಭಾಗದಲ್ಲಿ 400 ಮೀ., 800 ಮೀ., 1,500ಮೀ. ಹಾಗೂ ರಿಲೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಪ್ರಸ್ತುತ ಬೆಂಗಳೂರಿನ ಕ್ರೀಡಾ ಹಾಸ್ಟೆಲ್‌ನಲ್ಲಿ ಇರುವ ರಕ್ಷಿತಾ ಪಿಯುಸಿ ವಿದ್ಯಾರ್ಥಿನಿ. ಕ್ರೀಡಾ ತರಬೇತುದಾರ ರಾಹುಲ್ ಬಾಲಕೃಷ್ಣ, ಗೋವಿಂದ್, ಸೌಮ್ಯ ಸಾವಂತ್, ತಬರೇಶ್ ತರಬೇತಿ ಅಡಿ ಪಳಗಿದ್ದಾರೆ. 2018ರಲ್ಲಿ ಜಕಾರ್ತಾದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ ಅಥ್ಲೆಟಿಕ್ ವಿಭಾಗದಲ್ಲಿ 1,500ಮೀ ಓಟದಲ್ಲಿ ಚಿನ್ನದ ಪದಕ ಪಡೆದರು. 2020ರಲ್ಲಿ ಟೋಕಿಯೊ ಅಂತರ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದರು. ಆದರೆ ಕೋವಿಡ್ ಕಾರಣ ಅವಕಾಶ ಕೈ ತಪ್ಪಿತ್ತು.

ಈಚೆಗೆ ದೆಹಲಿಯಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT