ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಿದ ಶಿಕ್ಷಕರು

Published 31 ಮೇ 2024, 14:19 IST
Last Updated 31 ಮೇ 2024, 14:19 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬೇಸಿಗೆ ರಜೆ ಬಳಿಕ ಶಾಲೆಗಳು ಶುಕ್ರವಾರ ಪುನಾರಂಭವಾಗಿದ್ದು ಕಡೂರು ತಾಲ್ಲೂಕಿನ ಹೋಚಿಹಳ್ಳಿ ಕ್ಲಸ್ಟರ್ ಗಂಗನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂಗುಚ್ಛ ನೀಡಿ  ಆತ್ಮೀಯವಾಗಿ ಬರಮಾಡಿಕೊಂಡರು.

ಶಾಲೆ ಆರಂಭೋತ್ಸವ ಅಂಗವಾಗಿ ಶಾಲೆಯ ಕೊಠಡಿಗಳನ್ನು ತಳಿರು ತೋರಣ, ಹೂವುಗಳಿಂದ ಅಲಂಕರಿಸಲಾಗಿತ್ತು. ತಮ್ಮ ಪೋಷಕರೊಂದಿಗೆ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಗುಲಾಬಿಯೊಂದಿಗೆ ಸಿಹಿ ನೀಡಿ ಶಾಲೆಗೆ ಆಹ್ವಾನಿಸಿದರು.

ಶಾಲೆಯ ಮುಖ್ಯಶಿಕ್ಷಕ ಎಂ.ಎನ್‌.ಮಹಲಿಂಗಯ್ಯ ಮಾತನಾಡಿ, ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಒಟ್ಟು 15 ವಿದ್ಯಾರ್ಥಿಗಳಿದ್ದು ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಮಕ್ಕಳ ಆಗಮನ ಮೊದಲ ದಿನ ಸಿಹಿ ಅಡುಗೆ ಪಾಯಸ(ಕೀರು) ಅನ್ನ ಸಾಂಬಾರ್ ನೀಡಲಾಯಿತು. ಮೊದಲ ದಿನ ಮೂವರು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಜಿ.ಎಂ.ಶ್ರೀಧರ್, ಉಪಾಧ್ಯಕ್ಷೆ ಪುಷ್ಪಾ ಮುರುಳಿ, ಸಹಶಿಕ್ಷಕಿ ಟಿ.ಕೆ.ಸಾಕಮ್ಮ, ಅಂಗನವಾಡಿ ಕಾರ್ಯಕರ್ತೆ ಕಲಾವತಿ ಹಾಗೂ ಅಂಗನವಾಡಿ ಪುಟಾಣಿಗಳು, ಪೋಷಕರು, ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT