ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭದ್ರಾ ಮೇಲ್ದಂಡೆ: ನೀರು ತರಲು ಒತ್ತಡ ಹಾಕಿ’

Published 8 ಮಾರ್ಚ್ 2024, 16:28 IST
Last Updated 8 ಮಾರ್ಚ್ 2024, 16:28 IST
ಅಕ್ಷರ ಗಾತ್ರ

ಪರಶುರಾಂಪುರ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೈತರೆಲ್ಲರೂ ಭದ್ರಾ ಮೇಲ್ದಂಡೆ ನೀರು ತರಲು ರಾಜಕಾರಣಿಗಳ ಮೇಲೆ ಒತ್ತಡ ಹಾಕಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಹೇಳಿದರು.

ಹೋಬಳಿಯ ಪಿ. ಓಬನಹಳ್ಳಿಯಲ್ಲಿ ಶುಕ್ರವಾರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ರೈತರ ಕಡೆ ಗಮನಹರಿಸುತ್ತಿಲ್ಲ. ಬರಗಾಲದಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ರೈತರು ಭದ್ರಾ ಮೇಲ್ದಂಡೆ ತನ್ನಿ ಬಳಿಕ ಮತ ಕೇಳಲು ಬನ್ನಿ ಎಂದು ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

‘ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ರೈತರಿಗೆ ಪರಿಹಾರ ಕೊಡುವಲ್ಲಿ ಮೀನಮೇಷ ಏಣಿಸುತ್ತಿವೆ. ರೈತರೆಲ್ಲಾ ಒಂದಾಗಿ ಮಾರ್ಚ್‌ 18ರಂದು ಬೃಹತ್ ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಣ್ಣ ಹೇಳಿದರು.

ರೈತ ಸಂಘದ ಮೈಸೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ, ಸಂಘದ ಪಿ. ಓಬನಹಳ್ಳಿ ಘಟಕದ ಅಧ್ಯಕ್ಷ ಹಾಲುರಾಮೇಶ್ವರ, ಉಪಾಧ್ಯಕ್ಷ ಈರಣ್ಣ, ಪದಾಧಿಕಾರಿಗಳಾದ ಚೌಳೂರು ಪ್ರಕಾಶ, ಜಂಪಣ್ಣ, ಹನುಮಂತರಾಯ, ವೆಂಕಟರಮಣಪ್ಪ, ಖಾದರ್ ಬಾಷಾ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT