ಮಂಗಳೂರು: ಸಂತ ಅಂತೋನಿ ಆಶ್ರಮದ ವತಿಯಿಂದ ಸೇಂಟ್ ಆಂತೋನಿಯವರ ಪುಣ್ಯ ಸ್ಮರಣೆ ಹಬ್ಬವನ್ನು ಇದೇ 15ರಂದು ಮಿಲಾಗ್ರಿಸ್ ಚರ್ಚ್‌ನ ಆವರಣದಲ್ಲಿ ಆಚರಿಸಲಾಗುವುದು ಎಂದು ಫಾ.ಇನಿಲ್ ಡಿ’ಸೋಜ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಇದೇ 6 ರಂದು 9 ದಿನಗಳ ನವೇನ ಪ್ರಾರ್ಥನೆ ಆರಂಭಗೊಳ್ಳುವುದು. ಅದೇ ದಿನ ಸಂಜೆ 4 ಗಂಟೆಗೆ ಸಂತ ಅಂತೋನಿ ಪ್ರತಿಮೆಯ ಮೆರವಣಿಗೆ ಜೆಪ್ಪು ಸೇಂಟ್ ಆಶ್ರಮದಿಂದ ಕಂಕನಾಡಿ ವೃತ್ತ, ಫಳ್ನೀರ್ ಕಡೆಯಿಂದ ಮಿಲಾಗ್ರಿಸ್ ಚರ್ಚ್‌ಗೆ ತಲುವುತ್ತದೆ. ಶಿವಮೊಗ್ಗ ಧರ್ಮಪ್ರಾಂತ್ಯದ ಫಾ. ಫ್ರಾಂಕ್ಲಿನ್ ಡಿ’ಸೋಜ ಧ್ವಜಾರೋಹಣ ಮತ್ತು ಬಲಿಪೂಜೆ ನೆರವೇರಿಸುವರು ಎಂದರು.

ನವೇನ ಪ್ರಾರ್ಥನೆಯ ಸಮಯದಲ್ಲಿ 9 ವಿವಿಧ ವರ್ಗಗಳ ಜನರಿಗಾಗಿ ಪ್ರಾರ್ಥಿಸಲಾಗುವುದು. ಬೆಳಿಗ್ಗೆ 8 ಗಂಟೆಗೆ ರೋಗಿಗಳಿಗಾಗಿ ಡಾ. ಪಿಯುಸ್ ಡಿಸೋಜ, ಧಾರ್ಮಿಕರಿಗಾಗಿ ಬಲಿಪೂಜೆಯನ್ನು ಅರ್ಪಿಸುವರು. ಸಂಜೆ 4.30ಕ್ಕೆ ಕಲ್ಲಿಕೋಟೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ವರ್ಗಿಸ್ ಚಕ್ಕಾಲಕಲ್ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ಅರ್ಪಿಸುವರು. ಸಂಜೆ 6 ಗಂಟೆಗೆ ಮಂಗಳೂರು ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಬಲಿಪೂಜೆ ಅರ್ಪಿಸುವರು ಎಂದರು. ಆಡಳಿತಾಧಿಕಾರಿ ಫಾ. ಪ್ರಾನ್ಸಿಸ್ ಡಿಸೋಜ, ಧರ್ಮಪ್ರಾಂತ್ಯದ ಮಾಧ್ಯಮ ಸಮಿತಿಯ ಕಾರ್ಯದರ್ಶಿ ವಿನ್ಸೆಂಟ್ ಮಸ್ಕರೇನಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.