ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಲಿಕುಳ ವೀಕ್ಷಣೆಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನ

ನಾಳೆ ಜನರ ಸೇವೆ ಲೋಕಾರ್ಪಣೆ
Last Updated 3 ಜನವರಿ 2019, 13:59 IST
ಅಕ್ಷರ ಗಾತ್ರ

ಮಂಗಳೂರು: ಮಲೆನಾಡು ಅಭಿವೃದ್ದಿ ಮಂಡಳಿ ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮೂಲಕ ಪಿಲಿಕುಳದಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸಲು ರಾಜ್ಯ ಸರ್ಕಾರ ₹1 ಕೋಟಿ ಬಿಡುಗಡೆ ಮಾಡಿದ್ದು, ಈ ಅನುದಾನದಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲಾಗಿದೆ.

ಈ ವಾಹನಗಳನ್ನು ಪ್ರವಾಸಿಗರ ಸೌಕರ್ಯಕ್ಕಾಗಿ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮ ಇದೇ 5 ರಂದು ಮಧ್ಯಾಹ್ನ 3.30ಕ್ಕೆ ಪಿಲಿಕುಳ ಬಾಕ್ಸ್ ಆಫೀಸ್‌ ಮುಂಭಾಗದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಸದ ನಳಿನ್‌ಕುಮಾರ್ ಕಟೀಲ್‌, ಶಾಸಕರು, ಮೇಯರ್ ಭಾಸ್ಕರ್‌ ಕೆ. ಸಂಸ್ಥೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ.

ಇದರಿಂದಾಗಿ ಪಿಲಿಕುಳದ ಮುಖ್ಯದ್ವಾರದ ಒಳಗಿನಿಂದ ಬಸ್‌ಗಳು, ಕಾರು, ಲಾರಿ, ಆಟೋ, ದ್ವಿಚಕ್ರ ವಾಹನಗಳ ಚಾಲನೆಗೆ ನಿಷೇಧ ಹೇರಲಾಗಿದೆ. ಪಿಲಿಕುಳದ ಒಳಗಡೆ ಎದುರುಪದವಿಗೆ ಹೋಗುವ ಸಿಟಿ ಬಸ್‌ಗಳು ಪಿಲಿಕುಳದ ಮುಖ್ಯ ದ್ವಾರದವರೆಗೆ ಬಂದು, ತಿರುಗಿ ಪಿಲಿಕುಳದ ಒಳರಸ್ತೆಯ ಬದಲು ಮೂಡುಶೆಡ್ಡೆಯ ರಸ್ತೆಯ ಮೂಲಕ ಎದುರುಪದವಿಗೆ ಸಾಗಬಹುದಾಗಿದೆ. ಆದರೆ ಎದುರುಪದವು ಸುತ್ತಲಿನ ನಿವಾಸಿಗಳು ಆಡಳಿತ ಕಚೇರಿಯ ಅನುಮತಿ ಪಡೆದು ಪಿಲಿಕುಳದ ಒಳಗಿನ ರಸ್ತೆಯನ್ನು ಉಪಯೋಗಿಸಬಹುದು.

ವಿಶೇಷ ಸಂದರ್ಭಗಳಲ್ಲಿ ಶಾಲಾ ಮಕ್ಕಳ ಬಸ್‌ಗಳನ್ನು ಆಡಳಿತ ಕಚೇರಿಯ ಅನುಮತಿ ಮೇರೆಗೆ ನಿಗದಿತ ಶುಲ್ಕ ಪಾವತಿಸಿ ಪ್ರವೇಶಿಸಬಹುದು, ಇದಕ್ಕಾಗಿ ವ್ಯವಸ್ಥೆ ಮಾಡಲಾದ ಸ್ಥಳದಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು. ಯಾವುದೇ ಕಾರಣಕ್ಕೂ ಇತರೆ ವಾಹನಗಳಿಗೆ ಅವಕಾಶವಿಲ್ಲ. ಪಿಲಿಕುಳದ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳು, ಆಸ್ತಿ ಪಾಸ್ತಿಗಳ ಸಂರಕ್ಷಣೆ ಹಾಗೂ ಪ್ರವಾಸಿಗರ ಅನುಕೂಲತೆಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT