ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಶ್ವವಿದ್ಯಾಲಯಕ್ಕೆ 'ಹೊರಗುತ್ತಿಗೆ’ ಹೊರೆ

ಶೇ 50ರಷ್ಟು ಹುದ್ದೆ ಖಾಲಿ; ಅತಿಥಿ ಉಪನ್ಯಾಸಕರ ಗೌರವಧನ– ಸಿಗುತ್ತಿಲ್ಲ ಸರ್ಕಾರದ ಅನುದಾನ
Published 3 ಜನವರಿ 2024, 17:03 IST
Last Updated 3 ಜನವರಿ 2024, 17:03 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ 273 ಮಂಜೂರಾದ ಬೋಧಕ ಹುದ್ದೆಗಳಿದ್ದು, ಅವುಗಳಲ್ಲಿ 129 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ಸಿಬ್ಬಂದಿಯ ವೇತನ ಪಾವತಿ ವಿಶ್ವವಿದ್ಯಾಲಯಕ್ಕೆ ಹೊರೆಯಾಗಿ ಪರಿಣಮಿಸಿದೆ.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಯರಾಜ್ ಅಮೀನ್‌, ‘ವಿಶ್ವವಿದ್ಯಾಲಯದಲ್ಲಿ ಮಂಜೂರಾದ 29 ಪ್ರಾಧ್ಯಾಪಕರ ಹುದ್ದೆಗಳಲ್ಲಿ 22, ಸಹ ಪ್ರಾಧ್ಯಾಪಕ 42 ಹುದ್ದೆಗಳಲ್ಲಿ 28 ಹಾಗೂ, ಸಹಾಯಕ ಪ್ರಾಧ್ಯಾಪಕರ 202 ಹುದ್ದೆಗಳಲ್ಲಿ 79 ಖಾಲಿ ಇವೆ. ಎ, ಬಿ, ಸಿ, ಡಿ ಗುಂಪುಗಳ  ಮಂಜೂರಾತಿ ಪಡೆದ 547 ಹುದ್ದೆಗಳಲ್ಲಿ 358 ಭರ್ತಿ ಆಗಿಲ್ಲ. ಎ ಗುಂಪಿನ 28,  ಬಿ ಗುಂಪಿನ 15, ಸಿ ಗುಂಪಿನ 146 ಹಾಗೂ ಡಿ ಗುಂಪಿನ 169 ಹುದ್ದೆಗಳು ಖಾಲಿ ಇವೆ’ ಎಂದು ಮಾಹಿತಿ ನೀಡಿದರು. 

ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಸಂಗಪ್ಪ, ‘ಅತಿಥಿ ಉಪನ್ಯಾಸಕರ ಸಂಬಳಕ್ಕಾಗಿ ಪ್ರತಿ ತಿಂಗಳು ₹ 1.85 ಕೋಟಿ ವಿನಿಯೋಗಿಸಲಾಗುತ್ತಿದೆ. ಬೋಧಕೇತರ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ವೇತನಕ್ಕೆ ತಿಂಗಳಿಗೆ ₹1.50 ಕೋಟಿ ವೆಚ್ಚವಾಗುತ್ತಿದೆ. ಸೇವಾ ನಿವೃತ್ತಿ ಹೊಂದಿರುವ 409 ಸಿಬ್ಬಂದಿಯ ಪಿಂಚಣಿ ಪಾವತಿಗೆ ₹1.15 ಕೋಟಿ ಬೇಕು. ಇದರಲ್ಲಿ ₹ 83 ಲಕ್ಷ ಮಾತ್ರ ಸರ್ಕಾರ ಭರಿಸುತ್ತದೆ. ಉಳಿದ ಮೊತ್ತವನ್ನು ವಿಶ್ವವಿದ್ಯಾಲಯದ ಸಂಪನ್ಮೂಲದಿಂದಲೇ ಬಳಸಬೇಕಾಗಿದೆ’ ಎಂದು ಮಾಹಿತಿ ನೀಡಿದರು. 

ಕುಲಸಚಿವ ರಾಜು. ಕೆ., ‘ವಿಶ್ವವಿದ್ಯಾಲಯ ಆಂತರಿಕ ಸಂಪನ್ಮೂಲದಲ್ಲಿ ಬಹುಪಾಲು ಅತಿಥಿ ಉಪನ್ಯಾಸಕರು ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಂಬಳಕ್ಕೇ ವಿನಿಯೋಗವಾಗುತ್ತಿದೆ’ ಎಂದರು.

‘ಪಾಠ ಪ್ರವಚನ ಮುಂದುವರಿಸಬೇಕಾದರೆ, ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲೇ ಬೇಕಾಗುತ್ತದೆ. ಇಂತಹ ಅತಿಥಿ ಉಪನ್ಯಾಸಕರ ಗೌರವಧನದ ಮೊತ್ತವನ್ನು ಸರ್ಕಾರ ಭರಿಸಿದರೆ ವಿಶ್ವವಿದ್ಯಾಲಯದ ಮೇಲೆ ಹೊರೆ ಕಡಿಮೆ ಆಗಲಿದೆ. ಈ ಕುರಿತು ವಿಶ್ವವಿದ್ಯಾಲಯವು ಸರ್ಕಾರಕ್ಕೆ ‍ಪತ್ರ ಬರೆಯಲಿದೆ’ ಎಂದು ಕುಲಪತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT