ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | 270 ಗ್ರಾಂ ಎಂಡಿಎಂಎ ವಶ: ನಾಲ್ವರ ಬಂಧನ

Published 16 ಮೇ 2024, 6:16 IST
Last Updated 16 ಮೇ 2024, 6:16 IST
ಅಕ್ಷರ ಗಾತ್ರ

ಮಂಗಳೂರು: ಬೆಂಗಳೂರಿನಿಂದ ನಗರಕ್ಕೆ ಕಾರಿನಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾಗಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ  270 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಬಿಜೈ ನ್ಯೂ ರೊಡ್‌ ನಿವಾಸಿ ಮೊಹಮ್ಮದ್ ಅಮೀನ್ ರಫಿ (23), ಅಡ್ಡೂರು ಗ್ರಾಮದ ಬಂಡ್ಸಾಲೆ ಹೌಸ್ ನಿವಾಸಿ ಮೊಹಮ್ಮದ್ ಸಿನಾನ್ ಅಬ್ದುಲ್ಲಾ(23), ಬಂದರಿನ ಜೆ.ಎಂ.ಕ್ರಾಸ್ ರಸ್ತೆ ಬಳಿಯ ಬಾವಾ ಮಹಲ್ ನಿವಾಸಿ ಮೊಹಮ್ಮದ್ ನೂಮಾನ್ (22), ಉಳ್ಳಾಲ ತಾಲ್ಲೂಕಿನ ಬೊಳಿಯಾರಿನ ಕಂಡಿಮಾರ್ ಹೌಸ್ ನಿವಾಸಿ ಮೊಹಮ್ಮದ್ ಶಫೀಲ್‌ (23) ಬಂಧಿತರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

‘ನಗರಕ್ಕೆ  ನಿಷೇಧಿತ ಮಾದಕ ಪದಾರ್ಥವನ್ನು ಕಾರಿನಲ್ಲಿ  ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧಾರದಲ್ಲಿ ಸಿಸಿಬಿ ಪೊಲೀಸರು  ದೇರಳಕಟ್ಟೆಯ ಬಳಿ ಟೊಯೊಟ ಕೊರೊಲ ಕಾರನ್ನು ತಡೆದು ಪರಿಶೀಲಿಸಿದ್ದರು. ಅದರಲ್ಲಿ ಎಂಡಿಎಂಎ ಪತ್ತೆಯಾಗಿತ್ತು. ವಶಪಡಿಸಿಕೊಂಡ ಎಂಡಿಎಂಎ ಅಂದಾಜು ಮೌಲ್ಯ ₹ 6.50 ಲಕ್ಷ.  ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್ ಫೋನ್‌ಗಳು,  ಕಾರು, ಡಿಜಿಟಲ್ ಮಾಪಕವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಸ್ವತ್ತುಗಳ ಮೌಲ್ಯ₹ 14.85 ಲಕ್ಷ  ಆಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಆರೋಪಿಗಳು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿದ್ದರು. ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿ ಇಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಮಾರಾಟ ಮಾಡುವವರಿದ್ದರು. ಈ ಮಾದಕ ವಸ್ತು ಮಾರಾಟ ಹಾಗೂ ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದೆ. ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಆರೋಪಿಗಳಲ್ಲಿ ಮೊಹಮ್ಮದ್ ಅಮೀನ್ ರಾಫಿ ನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ 2021ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲೂ ಆರೋಪಿಯಾಗಿದ್ದ’ ಎಂದು ತಿಳಿಸಿದ್ದಾರೆ. 

ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ ನಡೆದ ಈ  ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್ ಎಚ್.ಎಂ., ಪಿಎಸ್ಐ ಶರಣಪ್ಪ ಭಂಡಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಮೊಹಮ್ಮದ್‌ ನೂಮಾನ್‌
ಮೊಹಮ್ಮದ್‌ ನೂಮಾನ್‌
ಮೊಹಮ್ಮದ್ ಶಫೀಲ್‌
ಮೊಹಮ್ಮದ್ ಶಫೀಲ್‌
ಮೊಹಮ್ಮದ್‌ ಸಿನಾನ್‌ ಅಬ್ದುಲ್ಲಾ
ಮೊಹಮ್ಮದ್‌ ಸಿನಾನ್‌ ಅಬ್ದುಲ್ಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT