ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು: ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ

Published 17 ಮೇ 2024, 11:18 IST
Last Updated 17 ಮೇ 2024, 11:18 IST
ಅಕ್ಷರ ಗಾತ್ರ

ಕಾಸರಗೋಡು: ತಲೆಮರೆಸಿಕೊಂಡಿದ್ದ ಆರೋಪಿ, ಭದ್ರಾವತಿಯ ದೇವನಹಳ್ಳಿ ನಿವಾಸಿ ಸಯ್ಯದ್ ಆಶಿಫ್ (42) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. 2013 ಅ.24ರಂದು ರಾತ್ರಿ ಉಪ್ಪಳ ಮಣ್ಣಂಗುಳಿ ಎಂಬಲ್ಲಿ ಮುತ್ತಲಿಬ್ ಎಂಬುವರನ್ನು ಥಳಿಸಿ ಕೊಲೆಮಾಡಿದ್ದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಲಾರಿಯಲ್ಲಿ ಸಾಗಿಸುತ್ತಿದ್ದ ಪಾನ್ ಉತ್ಪನ್ನ ಪತ್ತೆ

ಕಾಸರಗೋಡು: ಕುಂಬಳೆಯಲ್ಲಿ ಶುಕ್ರವಾರ ಲಾರಿಯಲ್ಲಿ ಸಾಗಿಸುತ್ತಿದ್ದ ₹ 30 ಲಕ್ಷ ಮೌಲ್ಯದ ನಿಷೇಧಿತ ಪಾನ್ ಉತ್ಪನ್ನಗಳನ್ನು ಪೊಲೀಸರು ಪತ್ತೆ ಮಾಡಿ ವಶಪಡಿಸಿದ್ದಾರೆ.

ಲಾರಿ ಚಾಲಕ, ಕೊಲ್ಲಂ ನಿವಾಸಿ ಅನ್ವರ್ (43) ಎಂಬಾತನನ್ನು ವಶಕ್ಕೆ ತೆಗದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈರುಳ್ಳಿ ಚೀಲಗಳ ನಡುವೆ ಪಾನ್ ಉತ್ಪನ್ನಗಳನ್ನು ಬಚ್ಚಿಡಲಾಗಿತ್ತು. ಗುಪ್ತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಕಾರುಗಳ ಡಿಕ್ಕಿ: 4 ಮಂದಿಗೆ ಗಾಯ

ಕಾಸರಗೋಡು: ಉಪ್ಪಳದಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ 4 ಮಂದಿ ಗಾಯಗೊಂಡಿದ್ದಾರೆ. ಹೊಸಂಗಡಿಯಿಂದ ಉಪ್ಪಳಕ್ಕೆ ಬರುತ್ತಿದ್ದ ಕಾರು ಮತ್ತು ಉಪ್ಪಳದಿಂದ ಮಂಜೇಶ್ವರಕ್ಕೆ ತೆರಳುತ್ತಿದ್ದ ಕಾರುಗಳು ಡಿಕ್ಕಿಯಾದವು.

ನೆಲ್ಲಿಕುಂಜೆ ಕಡಲತೀರಕ್ಕೆ ಬಂದ ಬೋಟು

ಕಾಸರಗೋಡು: ಜನರಿಲ್ಲದ ಬೋಟೊಂದು ನೆಲ್ಲಿಕುಂಜೆಯ ಕಡಲತೀರಕ್ಕೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಊಹಾಪೋಹಕ್ಕೆ ಕಾರಣವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕಡಲಮಧ್ಯೆ ವಿಕೋಪದಿಂದ ಮೀನುಗಾರರು ಬಿಟ್ಟು ತೆರಳಿದ ಬೋಟೆಂಬುದು ಖಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT