ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಯನ್ ಬ್ಯಾಂಕ್ ರಿಟೈಲಥಾನ್ ನಾಳೆ

Published 27 ಫೆಬ್ರುವರಿ 2024, 4:46 IST
Last Updated 27 ಫೆಬ್ರುವರಿ 2024, 4:46 IST
ಅಕ್ಷರ ಗಾತ್ರ

ಮಂಗಳೂರು: ಯೂನಿಯನ್‌ ಬ್ಯಾಂಕ್ ಆಶ್ರಯದಲ್ಲಿ ಇದೇ 28 ರಂದು ನಗರದ ಟಿಎಂಎ ಪೈ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ರಿಟೈಲಥಾನ್ ಮೆಗಾ ರಿಟೈಲ್ ಎಕ್ಸ್ ಪೊ ಹಮ್ಮಿಕೊಳ್ಳಲಾಗಿದೆ‌ ಎಂದು ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ಮಹೇಶ್ ಜೆ. ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ನಡೆಯಲಿರುವ ಈ ರಿಟೈಲಥಾನ್‌ನಲ್ಲಿ ರೋಹನ್‌ ಕಾರ್ಪೊರೇಷನ್, ನಾರ್ದರ್ನ್ ಸ್ಕೈ, ಎಂಜಿಎಂ ಮುಕುಂದ್ ರಿಯಾಲ್ಟಿ, ಭಂಡಾರಿ, ಮೋಹತಿಶ್ಯಾಂ, ಮಾರಿಯನ್ ಸೇರಿದಂತೆ ಕಟ್ಟಡ ನಿರ್ಮಾಣ ಕ್ಷೇತ್ರದ 20ಕ್ಕೂ ಅಧಿಕ ಸಂಸ್ಥೆಗಳು ಭಾಗವಹಿಸಲಿವೆ. 50ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಸ್ತುತಪಡಿಸಲಿದ್ದು, 3 ಸಾವಿರಕ್ಕೂ ಹೆಚ್ಚು ಫ್ಲ್ಯಾಟ್ ಗಳ ಆಯ್ಕೆ ಗ್ರಾಹಕರಿಗೆ ಲಭಿಸಲಿದೆ. ಬಿಎಂಡಬ್ಲ್ಯು, ಆಡಿ, ಸ್ಕೋಡಾ, ಟಾಟಾ, ಟೊಯೋಟಾ, ಹೊಂಡಾ ಸೇರಿದಂತೆ ವಾಹನ ಮಾರಾಟ ಕ್ಷೇತ್ರದ ವಿವಿಧ ಬ್ರ್ಯಾಂಡ್ ಗಳು ಭಾಗವಹಿಸಲಿದ್ದು, ಆಕರ್ಷಕ‌ ರಿಯಾಯಿತಿ ಗಳನ್ನು ಒದಗಿಸಲಿವೆ. ಶಿಕ್ಷಣ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳು ಉನ್ನತ ಶಿಕ್ಷಣದ ಅವಕಾಶಗಳ ಮಾಹಿತಿ ಒದಗಿಸಲಿವೆ' ಎಂದರು.

'ಈ ಎಕ್ಸ್‌ ಪೊದಲ್ಲಿ ವಸತಿ ಖರೀದಿಸುವವರಿಗೆ ಯೂನಿಯನ್‌ ಬ್ಯಾಂಕ್ ಶೇ 8.30 ಬಡ್ಡಿ ದರದ ಸಾಲ, ವಾಹನ ಖರೀದಿಗೆ  ಶೇ 8.70 ಬಡ್ಡಿದರದಲ್ಲಿ ಸಾಲ ಒದಗಿಸಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಬ್ಯಾಂಕ್ ₹ 40 ಲಕ್ಷ ಸಾಲ‌ ನೀಡಲಿದೆ' ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಪ್ರಾದೇಶಿಕ ಉಪಮುಖ್ಯಸ್ಥ ಖುರೇಷಿ, ಚಿಲ್ಲರೆ‌ ಸಾಲ ವಿಭಾಗದ ಮುಖ್ಯಸ್ಥೆ ಸುಮಾ,  ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಂಜೋಗ್, ‘ಪ್ರಾಜೆಕ್ಟ್‌ ಪವರ್’ ವಿಭಾಗದ ವಿಜಯಸಿಂಹ ರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT