ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಯ ಸಾವಿನಿಂದ ನೊಂದು ಮಗ ಆತ್ಮಹತ್ಯೆ

Published 12 ಮೇ 2024, 16:21 IST
Last Updated 12 ಮೇ 2024, 16:21 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಸಮೀಪದ ಚೀಲಾಪುರ ಗ್ರಾಮದ ಶಿವಕುಮಾರ್ (32) ಅವರು ತಮ್ಮ ತಂದೆಯ ಸಾವಿನಿಂದ ಬೇಸತ್ತು ಗುರುವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಕುಮಾರ್ ತಂದೆ ಚಂದ್ರನಾಯ್ಕ (65) ಗುರುವಾರ ಬೆಳಗ್ಗೆ ಮೃತಪಟ್ಟಿದ್ದರು.

ಶಿವಕುಮಾರ್‌ಗೆ ಎಂಟು ವರ್ಷಗಳ ಹಿಂದೆ ಕಬ್ಬು ಕಡಿಯುವಾಗ ಆಕಸ್ಮಿಕವಾಗಿ ಹೊಡೆತ ಬಿದ್ದು ಎಡಗೈ ತುಂಡಾಗಿತ್ತು. ಆಸ್ಪತ್ರೆ ಇನ್ನಿತರೆ ಖರ್ಚಿಗೆ ಹಲವು ಕಡೆ ಸಾಲ ಮಾಡಿದ್ದರು. ಅವಿವಾಹಿತರಾದ ಇವರಿಗೆ ತಂದೆಯೇ ಎಲ್ಲ ರೀತಿಯ ನೆರವು ನೀಡಿದ್ದರು. ಆದರೆ ಅವರ ನಿಧನದಿಂದ ಮುಂದಿನ ಜೀವನದ ಬಗ್ಗೆ ಆತಂಕ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಸಹೋದರ ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT