ಹುಬ್ಬಳ್ಳಿ: 'ಮಜೇಥಿಯಾ ಫೌಂಡೇಷನ್ ಮತ್ತು ಸಂಸ್ಕೃತ ಭಾರತಿ ವತಿಯಿಂದ 'ಸಂಸ್ಕೃತಾಮೃತಮ್' ಉದ್ಘಾಟನಾ ಕಾರ್ಯಕ್ರಮ ನಗರದ ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಾ. 26ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ' ಎಂದು ಸಂಸ್ಕೃತ ಭಾರತಿಯ ಕರ್ನಾಟಕ ಉತ್ತರ ಪ್ರಾಂತ್ಯದ ಸಂಘಟನಾ ಮಂತ್ರಿ ಲಕ್ಷ್ಮಿನಾರಾಯಣ ಬಿ.ಎಸ್. ಹೇಳಿದರು.
'ಭಾರತೀಯರ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯ ಭಾಷೆಯಾದ ಸಂಸ್ಕೃತದ ಪುನರುಜ್ಜೀವನಕ್ಕಾಗಿ ಅವಳಿನಗರದಲ್ಲಿ 108 ದಿನ ಉಚಿತವಾಗಿ ಸಂಸ್ಕೃತ ಶಿಬಿರ ಹಮ್ಮಿಕೊಳ್ಳಲಾಗಿದೆ' ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ಪ್ರೊ. ಜಿ.ಆರ್. ಅಂಬಲಿ ಮತ್ತು ವ್ಯಾಪಾರಿ ಶ್ರೀರಾಮಸಿಂಗ್ ರಜಪೂತ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಸ್ಕೃತಾಮೃತಮ್ ಕಾರ್ಯಗಣದ ಉಪಾಧ್ಯಕ್ಷ ಅಶೋಕ ಹರಪನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ' ಎಂದರು.
'ಹುಬ್ಬಳ್ಳಿಯಲ್ಲಿ 10, ಧಾರವಾಡದಲ್ಲಿ 5 ಪ್ರದೇಶಗಳನ್ನು ಗುರುತಿಸಿದ್ದು, ಅವುಗಳನ್ನು ಉಪನಗರವೆಂದು ಹೆಸರಿಸಿ, ಶಿಬಿರ ನಡೆಸಲಾಗುವುದು. ಸಂಸ್ಕೃತ ಕ್ರೀಡೋತ್ಸವ, ಶಾಲಾ-ಕಾಲೇಜುಗಳಲ್ಲಿ ಭಾಷಣ ಸ್ಪರ್ಧೆ ಏರ್ಪಡಿಸಲಿದ್ದೇವೆ. ಸಂಘ-ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿವೆ. ನಗರದ ಒಂದು ಭಾಗವನ್ನು ಸಂಸ್ಕೃತ ನಗರ ಮಾಡುವ ಯೋಜನೆಯನ್ನು ಸಹ ಹಾಕಿಕೊಂಡಿದ್ದೇವೆ' ಎಂದರು.
ಮುಕುಂದ ಜಠಾರ, ಸತೀಶ್ ಮುರೂರು, ಎ.ಸಿ. ಗೋಪಾಲ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.