ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಡೆದ ಗಾಜು, ಕಸದ ರಾಶಿ: ಕುಂದಗೋಳ ತಹಶೀಲ್ದಾರ್ ಕಚೇರಿಯಲ್ಲಿ ಸ್ವಚ್ಛತೆ ಮರೀಚಿಕೆ

ಬಸನಗೌಡ ಪಾಟೀಲ
Published 24 ನವೆಂಬರ್ 2023, 6:28 IST
Last Updated 24 ನವೆಂಬರ್ 2023, 6:28 IST
ಅಕ್ಷರ ಗಾತ್ರ

ಕುಂದಗೋಳ: ಪಟ್ಟಣದ ತಹಶೀಲ್ದಾರ್ ಕಚೇರಿ ಒಳಪ್ರವೇಶಿಸಿದರೆ ಗಲೀಜು, ಕಸ, ಮೂಲೆಗಳಲ್ಲಿ ಗುಟ್ಕಾ, ಎಲೆ-ಅಡಕೆ ತಿಂದು ಉಗುಳಿರುವ ದೃಶ್ಯ ಕಣ್ಣಿಗೆ ರಾಚುತ್ತದೆ. ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಕಚೇರಿಯ ಮುಂಭಾಗದ ಮೂಲೆ ಯಲ್ಲಿ ಆಳೆತ್ತರಕ್ಕೆ ಹುಲ್ಲು ಬೆಳೆದಿದೆ. ಅಕ್ಕ-ಪಕ್ಕದಲ್ಲಿ ಕಸ ಸಂಗ್ರಹವಾಗಿದೆ. ಹಿಂಭಾಗ ಹುಲ್ಲುಗಾವಲಿನಂತಾಗಿದೆ. ಒಳ ಆವರಣದಲ್ಲಿ ಮಳೆ ನೀರು ನಿಂತು ಹಸಿರು ಬಣ್ಣಕ್ಕೆ ತಿರುಗಿದೆ. ಕಿಟಕಿ ಗಾಜುಗಳು ಒಡೆದಿವೆ. ಕಾಗದ, ಚಹಾ ಕಪ್‍ಗಳು ಎಲ್ಲೆಂದರಲ್ಲಿ ಬಿದ್ದಿವೆ. ಪೇಪರ್, ಪ್ಲಾಸ್ಟಿಕ್ ಇತ್ಯಾದಿಗಳನ್ನು ಸುಟ್ಟಿರುವುದು ಕಂಡು ಬರುತ್ತದೆ.

‘ಶೌಚಾಲಯಕ್ಕೆ ಹೋಗುವ ದಾರಿಯಲ್ಲಿ ಕಸ ತುಂಬಿದ್ದು, ತುಕ್ಕು ಹಿಡಿದ ವಾಹನವೊಂದನ್ನು ನಿಲ್ಲಿಸಲಾಗಿದೆ. ಶೌಚಾಲಯದ ಮುಂದೆ ಪಾಚಿ ಕಟ್ಟಿದೆ. ಇದನ್ನೇ ಜನರು ಅನಿವಾರ್ಯವಾಗಿ ಬಳಸುವಂತಾಗಿದೆ. ಕಚೇರಿಯ ಸಿಬ್ಬಂದಿ ಬಳಸುವ ಶೌಚಾಲಯದ ಸ್ಥಿತಿ ಕೂಡ ಹೀಗೇ ಇದೆ’ ಎನ್ನುತ್ತಾರೆ ಶಿರೂರು ಗ್ರಾಮದ ರಾಮಪ್ಪ.

ಅಡ್ಡಾದಿಡ್ಡಿ ವಾಹನ ನಿಲುಗಡೆ: ಕಚೇರಿ ಮುಂದೆ ವಾಹನಗಳ ನಿಲುಗಡೆಗೆ ಜಾಗವಿದ್ದರೂ, ಜನರು ಸರಿಯಾಗಿ ಪಾರ್ಕಿಂಗ್ ಮಾಡುವುದಿಲ್ಲ’ ಎಂದು ನಾಗರಾಜ ಬೇಸರ ವ್ಯಕ್ತಪಡಿಸಿದರು.

ಕಚೇರಿಗೆ ಬರುವ ಜನರು, ಕೆಲವು ಸಿಬ್ಬಂದಿ ಅಡಿಕೆ ತಿಂದು ಉಗುಳುತ್ತಾರೆ. ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು
ಭೀಮೇಶ್ ಮಾದನೂರು, ಸಾರ್ವಜನಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT