ಶನಿವಾರ, ಫೆಬ್ರವರಿ 27, 2021
19 °C

ಲಕ್ಷ್ಮೇಶ್ವರ: ಹಂದಿಗಳ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹೆಚ್ಚಿರುವ ಹಂದಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪುರಸಭೆ ಮುಂದಾಗಿದ್ದು ಗುರುವಾರ ಸಾರ್ವಜನಿಕ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದ ನೂರಾರು ಹಂದಿಗಳನ್ನು ಸ್ಥಳಾಂತರಿಸಲಾಯಿತು.

ಹಂದಿಗಳನ್ನು ನಿಯಂತ್ರಿಸುವಂತೆ ಮಾಲೀಕರಿಗೆ ಅನೇಕ ಬಾರಿ ಸೂಚನೆ ನೀಡಿದರೂ ಅವರು ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಹಂದಿಗಳನ್ನು ಪಟ್ಟಣದಿಂದ ಬೇರೆಡೆ ಸಾಗಿಸಲು ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ವಿವಿಧ ವಾರ್ಡ್‍ಗಳಲ್ಲಿನ ಹಂದಿಗಳನ್ನು ಹೊರಗೆ ಸಾಗಿಸಲಾಯಿತು.

ಈ ಸಂದರ್ಭದಲ್ಲಿ ಕೆಲ ಹಂದಿ ಮಾಲೀಕರು ಪುರಸಭೆ ಸಿಬ್ಬಂದಿಯೊಂದಿಗೆ ತಕರಾರು ತೆಗೆದರೂ ಪ್ರಯೋಜನವಾಗಲಿಲ್ಲ. ಪುರಸಭೆ ಸಿಬ್ಬಂದಿ ಬಸವಣ್ಣೆಪ್ಪ ನಂದೆಣ್ಣವರ, ಮಂಜುನಾಥ ಮುದಗಲ್, ದೇವಪ್ಪ ನಂದೆಣ್ಣವರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು