ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರ ಉದ್ಧಾರಕ್ಕೆ ಶ್ರಮಿಸಿ: ತೋಂಟದ ಶ್ರೀ, ಅನ್ನದಾನೇಶ್ವರ ಪುರಾಣ ಮಂಗಲೋತ್ಸವ

ಅನ್ನದಾನೇಶ್ವರ ಪುರಾಣ ಮಂಗಲೋತ್ಸವ
Last Updated 9 ನವೆಂಬರ್ 2021, 4:42 IST
ಅಕ್ಷರ ಗಾತ್ರ

ನರೇಗಲ್: ‘ಭಕ್ತರು ಸ್ವಾಮಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಬೇಕು ಹಾಗೂ ಶ್ರೀಗಳು ಭಕ್ತರ ಉದ್ಧಾರಕ್ಕಾಗಿ ಶ್ರಮಿಸಬೇಕು’ ಎಂದು ಗದಗ-ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ನಡೆಯುತ್ತಿರುವ ಅಭಿನವ ಅನ್ನದಾನ ಸ್ವಾಮೀಜಿ ಅವರ ಗುರುವಂದನೆ ಹಾಗೂ ಮುಪ್ಪಿನ ಬಸವಲಿಂಗ ದೇವರ ನಿರಂಜನ ಚರಪಟ್ಟಾಧಿಕಾರ ಕಾರ್ಯಕ್ರಮದ ಅಂಗವಾಗಿ ಸೋಮವಾರ ನಡೆದ ಅನ್ನದಾನೇಶ್ವರ ಮಹಾಪುರಾಣದ ಮಂಗಲೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

‘ಪ್ರತಿಭಾ ಸಂಪನ್ನರಾಗಿರುವ ಮುಪ್ಪಿನ ಬಸವಲಿಂಗ ದೇವರು ತಮ್ಮ ಗುರುವಿನ ಗರಡಿಯಲ್ಲಿ ಪಳಗಿದ್ದಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿಯನ್ನು ಮಾಡಿರುವ ಅನ್ನದಾನೇಶ್ವರ ಮಠದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಅವರ ಕಷ್ಟ, ನಷ್ಟ, ಅಭಿವೃದ್ಧಿ ಕಾರ್ಯಗಳಿಗೆ ಭಕ್ತರು ಪ್ರೀತಿ ತೋರುವ ಮೂಲಕ ಸಹಕರಿಸಬೇಕು’ ಎಂದರು.

ಮಂಗಲನುಡಿಯನ್ನು ಡಾ. ಈಶ್ವರ ಮಂಟೂರ ಅವರು ನೀಡಿದರು. ಡಾ. ಅಭಿನವ ಅನ್ನದಾನ ಸ್ವಾಮೀಜಿ, ವಳಬಳ್ಳಾರಿಯ ಸುವರ್ಣಗಿರಿಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಭಾತಂಭ್ರಾ ಭಾಲ್ಕಿ ನಿರಂಜನ ಸಂಸ್ಥಾನ ಮಠದ ಶಿವಯೋಗಿಶ್ವರ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಲಿಂಗನಾಯಕನ ಹಳ್ಳಿಯ ಜಂಗಮಲಿಂಗ‌ ಕ್ಷೇತ್ರದ ಚೆನ್ನವೀರ ಸ್ವಾಮೀಜಿ, ಆಡಿಅಂದಿಗನೂರ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ಅಡವಿ ಅಮರೇಶ್ವರದ ಶಾಂತಮಲ್ಲ ಸ್ವಾಮೀಜಿ, ನೀಲಗುಂದ ಗುಡ್ಡ ಮಠದ ಚನ್ನಬಸವ ಸ್ವಾಮೀಜಿ, ಬೆಕ್ಕಿನ‌ಕಲ್ಲಮಠ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ನಂದವಾಡಗಿ ಹಿರೇಮಠದ ಚನ್ನಬಸವ ಸ್ವಾಮೀಜಿ, ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ದೇವರು, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಜಿ.ಎಸ್.‌ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT