ಬಂದ್‌ ವಿರುದ್ಧ ಅಖಂಡತೆ ಕೂಗು

7
ಕನ್ನಡಮ್ಮನ ಜಾತ್ರೆ, ಉತ್ತರ ಕರ್ನಾಟಕ ಅಭಿವೃದ್ಧಿಗೆ ವಿವಿಧ ಸಂಘಟನೆಗಳಿಂದ ಮನವಿ

ಬಂದ್‌ ವಿರುದ್ಧ ಅಖಂಡತೆ ಕೂಗು

Published:
Updated:
Deccan Herald

ಗದಗ: ಅಖಂಡ ಕರ್ನಾಟಕ ಉಳಿವಿಗಾಗಿ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಆಗ್ರಹಿಸಿ ಗುರುವಾರ ನಗರದಲ್ಲಿ ನಾಲ್ಕು ಕನ್ನಡಪರ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದವು.

ವಿಜಯ ಕುಲಕರ್ಣಿ ಅಧ್ಯಕ್ಷತೆಯ ಕಳಸಾ ಬಂಡೂರಿ ಹಾಗೂ ಮಲಪ್ರಭಾ ಜೋಡಣಾ ಹೋರಾಟ ಸಮಿತಿ ಮಾತ್ರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಆಗ್ರಹಿಸಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಬಂದ್‌ ಇರಲಿಲ್ಲ. ಹೀಗಾಗಿ,ಜನಜೀವನ ಎಂದಿನಂತೆ ನಡೆಯಿತು.

‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಬೇಡ, ಈ ಭಾಗದ ಸಮಗ್ರ ಅಭಿವೃದ್ಧಿಗೆ ನಂಜುಡಪ್ಪ ವರದಿ ಜಾರಿಯಾಗಬೇಕು. ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಕೆಲವು ಕಚೇರಿಗಳನ್ನು ಬೆಂಗಳೂರಿನಿಂದ ಸುವರ್ಣಸೌಧದಕ್ಕೆ ಸ್ಥಳಾಂತರಿಸಬೇಕು’ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಆಗ್ರಹಿಸಿದರು. ನಗರದ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.

ಕರವೇ ಜಿಲ್ಲಾ ಘಟಕ ಮತ್ತು ಜೈ ಭೀಮ ಸೇನಾ ಸಂಘರ್ಷ ಸಮಿತಿ ಸದಸ್ಯರು ನಗರದ ಗಾಂಧಿ ವೃತ್ತದಲ್ಲಿ ಅಖಂಡ ಕರ್ನಾಟಕ ಏಕೀಕರಣದ ಸವಿನೆನಪಿಗಾಗಿ ‘ಕನ್ನಡಮ್ಮನ’ ಜಾತ್ರೆ ಆಚರಿಸಿದರು. ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕನ್ನಡ ತಾಯಿಯ ಮಕ್ಕಳು, ನಾವೆಲ್ಲ ಒಂದೇ ಎಂದು ಸಾರಿದರು.ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !