ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ ಹುಂಡಿ ಕಳವಿಗೆ ಯತ್ನ

Published 17 ಮೇ 2024, 15:39 IST
Last Updated 17 ಮೇ 2024, 15:39 IST
ಅಕ್ಷರ ಗಾತ್ರ

ಹಾಸನ: ನಗರದ ಶರೀಫ್ ಕಾಲೊನಿಯ ಖೋಬಾ ಮಸೀದಿಯಲ್ಲಿ ಹುಂಡಿ ಕಳವಿಗೆ ವಿಫಲ ಯತ್ನ ನಡೆದಿದೆ.

 ಹುಂಡಿ ಮೇಲೆ ಮುಸುಕುಧಾರಿ ಕಳ್ಳ ಸೈಜ್ ಕಲ್ಲು ಎತ್ತಿಹಾಕಿ ಹಣ ದೋಚಲು ಯತ್ನಿಸಿರುವ ದೃಶ್ಯ ಮಸೀದಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕಳ್ಳ  ಮುಖಕ್ಕೆ ಪಂಚೆ ಕಟ್ಟಿಕೊಂಡು ತಡರಾತ್ರಿ 1.30ಕ್ಕೆ ಮಸೀದಿ ಒಳಗೆ ಪ್ರವೇಶಿಸಿದ್ದು ಹುಂಡಿ ಮೇಲೆ ಐದಾರು ಬಾರಿ ಸೈಜ್ ಕಲ್ಲು ಎತ್ತಿಹಾಕಿದ್ದ.  ಶಬ್ದಕ್ಕೆ ಓಡಿ ಬಂದ ಮಸೀದಿಯಲ್ಲಿ ಮಲಗಿದ್ದ ಗುರುಗಳ ಮೇಲೆ ಕಳ್ಳ ರಾಡಿನಿಂದ ಹಲ್ಲೆಗೆ ಪ್ರಯತ್ನಿಸಿ, ಕಾಂಪೌಂಡ್ ಹಾರಿ ಪರಾರಿ ಆಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಂದೂವರೆ ವರ್ಷದಲ್ಲಿ 4ನೇ ಬಾರಿ  ಮಸೀದಿಯಲ್ಲಿ ಕೃತ್ಯ ನಡೆಸಿದ್ದು, ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT