ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ | ಸಂಯಮದ ಜೀವನ ನಡೆಸಿ: ರವಿಕುಮಾರ್

ಜಿಲ್ಲೆಯಲ್ಲಿ 12,850 ಎಚ್‌ಐವಿ ಸೋಂಕಿತರು
Published 6 ಡಿಸೆಂಬರ್ 2023, 14:29 IST
Last Updated 6 ಡಿಸೆಂಬರ್ 2023, 14:29 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಎಚ್‌ಐವಿ ಸೋಂಕು ಹರಡದಂತೆ ಸಂಯಮದ ಜೀವನ ನಡೆಸಬೇಕು ಎಂದು ಡಿಎಪಿಸಿಯು ಜಿಲ್ಲಾ ಮೇಲ್ವಿಚಾರಕ ಬಿ.ಎಂ. ರವಿಕುಮಾರ್ ಹೇಳಿದರು.

ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಯುವರೆಡ್ ಕ್ರಾಸ್ ಘಟಕದ ಅಭಿವಿನ್ಯಾಸ ಮತ್ತು ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 12,850 ಮಂದಿ ಎಚ್‍ಐವಿ ಸೋಂಕಿತರಿದ್ದಾರೆ. ಎಚ್‌ಐವಿ ಹರಡದಂತೆ ಎಚ್ಚರ ವಹಿಸಬೇಕಾದರೆ ಮದುವೆ ಆಗುವವರೆಗೆ ಬ್ರಹ್ಮಚರ್ಯೆ ನಿಯಮಪಾಲಿಸಬೇಕು. ಪತಿ, ಪತ್ನಿ ಪರಸ್ಪರ ನಿಷ್ಠೆ ಹೊಂದಿರಬೇಕು ಮತ್ತು ಪರೀಕ್ಷೆಗೊಳಪಡಿಸಿದ ರಕ್ತ ಪಡೆಯಬೇಕು. ಮಾದಕ ವ್ಯಸನಿಗಳಾಗಬಾರದು. ಜೀವನ ಪರ್ಯಂತ ಎಚ್‌ಐವಿ ಬರದಂತೆ ನಿಗಾವಹಿಸಬೇಕು ಎಂದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಕೆಂಚೇಗೌಡ ಮಾತನಾಡಿ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 2102 ಮಂದಿ ಸೋಂಕಿತರಿದ್ದಾರೆ. ಎಚ್‌ಐವಿ ಸೋಂಕಿತರಿಗೆ ಮಾನಸಿಕ ಧೈರ್ಯ ತುಂಬುವ ಮೂಲಕ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

ಏಡ್ಸ್ ಕುರಿತು ಏರ್ಪಡಿಸಿದ್ದ ರಸಪ್ರಶ್ನೆ ಮತ್ತು ಪೋಸ್ಟರ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪಾವತಿ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಎಂ.ಕೆ. ಮಂಜುನಾಥ, ಯುವರೆಡ್ ಕ್ರಾಸ್ ಘಟಕದ ಸಂಚಾಲಕಿ ಎಂ. ನಿರುಪಮಾ, ಸಹಾಯಕ ಪ್ರಾಧ್ಯಾಪಕ ಡಿ.ಎಸ್. ಚೇತನ್, ದೈಹಿಕಶಿಕ್ಷಣ ನಿರ್ದೇಶಕ ಜೆ. ಭಾಸ್ಕರ, ಗ್ರಂಥಪಾಲಕಿ ಜೆ.ಎನ್. ಕವಿತಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT