ಗುರುವಾರ , ಮಾರ್ಚ್ 23, 2023
21 °C

ಹಾಸನ: ನಕಲಿ ನಂಬರ್ ಪ್ಲೇಟ್‌; ಬಸ್‌ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಸಂಚರಿಸುತ್ತಿದ್ದ ಖಾಸಗಿ ಬಸ್‌ ಅನ್ನು ಸಾರಿಗೆ ಇಲಾಖೆ ಅಧಿಕಾರಿಗಳು ನಗರದ ಚನ್ನಪಟ್ಟಣ ಬೈಪಾಸ್ ಬಳಿ ವಶಕ್ಕೆ ಪಡೆದಿದ್ದಾರೆ.

ಮಂಡ್ಯದಿಂದ ಹಾಸನಕ್ಕೆ ಮದುವೆ ದಿಬ್ಬಣ ಕರೆ ತರುತ್ತಿದ್ದ ಕೆಎ 10 ಬಿ 5454 ನಂಬರ್ ಪ್ಲೇಟ್ ಹೊಂದಿದ್ದ ಬಸ್ ಮಂಡ್ಯದ ರಾಘವೇಂದ್ರ ಎಂಬುವರಿಗೆ ಸೇರಿದ್ದು, ದಾಖಲೆ ಹಾಜರುಪಡಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಯಲ್ಲಿ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದ ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕ ಯಶವಂತ್ ಅನುಮಾನದಿಂದ ಖಾಸಗಿ ಬಸ್ ತಡೆದು ಪರಿಶೀಲನೆ ನಡೆಸಿದರು.

ನಂಬರ್ ಪ್ಲೇಟ್ ಮೇಲೆ ಹೊಸ ಸ್ಟಿಕ್ಕರ್ ಅಂಟಿಸಲಾಗಿತ್ತು. ಅದನ್ನು ಕಿತ್ತಾಗ ಹಳೇ ನಂಬರ್‌ ಅಚ್ಚು ಕಾಣಿಸಿತು. ಅದನ್ನೂ ಕಿತ್ತಾಗ ಮತ್ತೊಂದು ನಂಬರ್ ಇರುವುದು ಗೊತ್ತಾಯಿತು. ವಾಹನದ ಮೇಲಿದ್ದ ನೋಂದಣಿ ಸಂಖ್ಯೆ ಹಾಗೂ ದಾಖಲೆಗಳಿಗೂ ತಾಳೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಯು ಬಸ್ಸನ್ನು ವಶಕ್ಕೆ ಪಡೆದು ಮಾಲೀಕರಿಗೆ ನೋಟಿಸ್ ಜಾರಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.