ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು | ಗ್ರಾಮ ಒನ್ ಕೇಂದ್ರಕ್ಕೆ ಸಿಡಿಪಿಒ ಭೇಟಿ

Published 9 ಫೆಬ್ರುವರಿ 2024, 13:13 IST
Last Updated 9 ಫೆಬ್ರುವರಿ 2024, 13:13 IST
ಅಕ್ಷರ ಗಾತ್ರ

ಹಳೇಬೀಡು: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯ ಎಂಬ ವದಂತಿ ಹಿನ್ನೆಲೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಹಳೇಬೀಡು ಹಾಗೂ ಹಗರೆ ಗ್ರಾಮದ ಗ್ರಾಮ ವನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಆಗಮಿಸಿದ ಮಹಿಳೆಯರಿಗೆ, ‘ಮಾಹಿತಿ ಇಲ್ಲದೆ ಇ-ಕೆವೈಸಿ ಮಾಡಿಸಬಾರಾದು. ಸಮಸ್ಯೆ ಇದ್ದರೆ ಗೃಹಲಕ್ಷ್ಮಿ ಫಲಾನುಭವಿಗಳು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಭೇಟಿ ಮಾಡಿ ಮಾಹಿತಿ ಪಡೆಯಬೇಕು. ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರಾದು’ ಎಂದರು.

ಕಾರಣ ಇಲ್ಲದೆ ಇ-ಕೆವೈಸಿ ಮಾಡಬಾರಾದು. ಅಧಿಕೃತ ಕೆಲಸ ಮಾಡಿಸಬೇಕು ಎಂದು ಗ್ರಾಮ ಒನ್ ಕೇಂದ್ರದವರಿಗೆ ಸಿಡಿಪಿಒ ಉಮೇಶ್ ಎಚ್ಚರಿಕೆ ನೀಡಿದರು. ‘ಇ-ಕೆವೈಸಿಗೆ ಮುಗಿ ಬಿದ್ದ ಗೃಹಲಕ್ಷ್ಮಿಯರು’ ಶೀರ್ಷಿಕೆ ಅಡಿಯಲ್ಲಿ ಫೆಬ್ರವರಿ 8 ರಂದು ವರದಿ ಪ್ರಕಟವಾಗಿತ್ತು. ಮಹಿಳೆಯರು ಭಾರಿ ಸಂಖ್ಯೆಯಲ್ಲಿ ಗ್ರಾಮ ಒನ್‌ ಕೇಂದ್ರಗಳಿಗೆ ಬರುತ್ತಿರುವ ಬಗ್ಗೆ ಗಮನ ಸೆಳೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT