ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಗುಡುಗು ಸಿಡಿಲಿನ ಮಳೆ, ತಂಪಾದ ಇಳೆ

Published 20 ಏಪ್ರಿಲ್ 2024, 12:26 IST
Last Updated 20 ಏಪ್ರಿಲ್ 2024, 12:26 IST
ಅಕ್ಷರ ಗಾತ್ರ

ಹಳೇಬೀಡು: ಶುಕ್ರವಾರ ರಾತ್ರಿ ಹಳೇಬೀಡು ಸುತ್ತಮುತ್ತ ಗುಡುಗು ಸಿಡಲಿನೊಂದಿಗೆ ಭಾರಿ ಮಳೆ ಸುರಿದು ಭೂಮಿ ತಂಪಾಯಿತು. ಜೋರು ಮಳೆ ಬಂದಿದ್ದರಿಂದ ಅಧಿಕ ಉಷ್ಣಾಂಶದಿಂದ ತತ್ತರಿಸಿದ್ದ ಜನರಲ್ಲಿ ಸಂತಸ ಕಂಡು ಬಂದಿದೆ.

ವಿದ್ಯುತ್ ಕಂಬ, ದೊಡ್ಡಮರಗಳು ನೆಲಕ್ಕುರುಳಿ ಸಾಕಷ್ಟು ಹಾನಿಯೂ ಸಂಭವಿಸಿದೆ. ಹುಲ್ಲೇನಹಳ್ಳಿ, ಅಪ್ಪಗೌಡನಹಳ್ಳಿ ಬಳಿ ವಿದ್ಯುತ್ ಕಂಬ ಹಾಗೂ ತೆಂಗಿನಮರಗಳು ನೆಲಕ್ಕುರುಳಿವೆ.  ಮಳೆ ಇಲ್ಲದೆಬೆಳೆ ಹಾಳಾಗಿದ್ದರಿಂದ ತೆಂಗಿನ ಮರ ಉರುಳಿರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸಿಲ್ಲ.

ಹಳೇಬೀಡು ಸುತ್ತಮರದ ರೆಂಬೆಗಳು ಬಿದಿದ್ದರಿಂದ  ವಿದ್ಯುತ್ ತಂತಿ ತುಂಡಾಗಿ ಶುಕ್ರವಾರ ರಾತ್ರಿಯಿಡಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.  ಸೆಸ್ಕ್ ಸಿಬ್ಬಂದಿ  ಸರಿಪಡಿಸಿದರು.

ಹೊಯ್ಸಳೇಶ್ವರ ದೇವಾಲಯ ಮುಂಭಾಗದ ಕಾಂಪೌಂಡ್ ಪಕ್ಕ ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ನೀರು ನಿಂತು ಕೆಸರು ಗದ್ದೆಯಾಗಿತ್ತು.
ಜೋರು ಮಳೆಗೆ ಹಳ್ಳ ಹರಿದಿದ್ದರಿಂದ  ದ್ವಾರಸಮುದ್ರ ಕೆರೆ, ಬಿದುರುಕೆರೆ, ತಿಮ್ಮನಹಳ್ಳಿ ಕಟ್ಟೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಅಧಿಕ ಉಷ್ಣಾಂಶದಿಂದ ಭೂಮಿ ಒಣಗಿ ನಿಂತಿದೆ. ಕೆರೆ ಕಟ್ಟೆಗೆ ಬರುತ್ತಿರುವ ನೀರು ಭೂಮಿಯಲ್ಲಿ ಇಂಗುತ್ತಿದೆ. ಜೋರು ಮಳೆ ಆಗಾಗ್ಗೆ ಬಂದರೆ ಕೆರೆ ಕಟ್ಟೆಯಲ್ಲಿ ನೀರು ಕಾಣಬಹುದು ಎಂದು ಕೆ.ಮಲ್ಲಾಪುರದ ರೈತ ಎಂ.ಕೆ. ಹುಲೀಗೌಡ ಹೇಳಿದರು.

ಶುಕ್ರವಾರ ರಾತ್ರಿಯಿಡಿ ಮಳೆ ಸುರಿದಿದ್ದರಿಂದ ಹಳೇಬೀಡಿನ ಬಿದುರುಕೆರೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ.
ಶುಕ್ರವಾರ ರಾತ್ರಿಯಿಡಿ ಮಳೆ ಸುರಿದಿದ್ದರಿಂದ ಹಳೇಬೀಡಿನ ಬಿದುರುಕೆರೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT