ಸಮ್ಮೇಳನಾಧ್ಯಕ್ಷರಿಂದ ಬಾಹುಬಲಿಗೆ ಮಹಾಮಸ್ತಕಾಭಿಷೇಕ

7

ಸಮ್ಮೇಳನಾಧ್ಯಕ್ಷರಿಂದ ಬಾಹುಬಲಿಗೆ ಮಹಾಮಸ್ತಕಾಭಿಷೇಕ

Published:
Updated:
ಸಮ್ಮೇಳನಾಧ್ಯಕ್ಷ ಷ.ಶೆಟ್ಟರ್ ಭಾನುವಾರ ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ಬಾಹುಬಲಿಗೆ  ಮಹಾಮಸ್ತಕಾಭಿಷೇಕ ನೆರವೇರಿಸಿದರು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದರು

ಶ್ರವಣಬೆಳಗೊಳ: ಅಖಿಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಷ.ಶೆಟ್ಟರ್ ಭಾನುವಾರ ವಿಂಧ್ಯಗಿರಿಯಲ್ಲಿ ಭಾನುವಾರ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ‘ಷ.ಶೆಟ್ಟರ್‌ ಶ್ರವಣಬೆಳಗೊಳದ ಪರಂಪರೆಯ ಬಗ್ಗೆ ಆಂಗ್ಲಭಾಷೆಯಲ್ಲಿ ಬರೆದು  ಜಗತ್ತಿಗೆ ಪರಿಚಯಿಸಿದರು. ಇಲ್ಲಿಯ ಮಹಾದ್ವಾರವನ್ನು ಅವರೇ ವಿನ್ಯಾಸಗೊಳಿಸಿದ್ದಾರೆ’ ಎಂದು ಹೇಳಿದರು.

ಷ.ಶೆಟ್ಟರ್‌ ಅವರು ಮಾತನಾಡಿ, ‘ನನಗೆ ಇದು ಸ್ಮರಣಾರ್ಹ ಘಟನೆ’ ಎಂದರು. ಸಮ್ಮೇಳನಕ್ಕೆ ಆಗಮಿಸಿದ ಸಾಹಿತಿಗಳಿಗಾಗಿ ವಿಶೇಷ ಮಸ್ತಕಾಭಿಷೇಕ ಕಾರ್ಯಕ್ರಮವನ್ನು ಕ್ಷೇತ್ರ ಆಯೋಜಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !