ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಬಸ್‍ನಲ್ಲಿ 42 ಗ್ರಾಂ ಚಿನ್ನದ ಸರ ಕಳವು

Published 12 ಮೇ 2024, 14:08 IST
Last Updated 12 ಮೇ 2024, 14:08 IST
ಅಕ್ಷರ ಗಾತ್ರ

ಹಾಸನ: ಸಕಲೇಶಪುರದಿಂದ ಮಾಗೇರಿಗೆ ಹೋಗುವ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕೊರಳಲ್ಲಿದ್ದ 42 ಗ್ರಾಂ ಚಿನ್ನದ ಸರವನ್ನು ಕಳವು ಮಾಡಲಾಗಿದೆ.

ಸಕಲೇಶಪುರ ತಾಲ್ಲೂಕಿನ ಕಳಲೆ ಗ್ರಾಮದ ಶೀಲಾ ಕೆ.ಎಸ್‌. ಅವರು ಆನೆಮಹಲ್‌ಗೆ ಹೋಗಿದ್ದು, ಹಸೆ ಶಾಸ್ತ್ರ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ಅಕ್ಕ ಮಂಜುಳಾ ಅವರೊಂದಿಗೆ ಸಕಲೇಶಪುರದ ಹೊಸ ಬಸ್ ನಿಲ್ದಾಣದಿಂದ ಮಾಗೇರಿ ಕಡೆ ಹೋಗುವ ಬಸ್ ಹತ್ತಿದ್ದಾರೆ. ಬಸ್‍ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದು, ಕುತ್ತಿಗೆಗೆ ಕೈಹಾಕಿ ನೋಡಿದಾಗ ಚಿನ್ನದ ಸರ ಇರಲಿಲ್ಲ. ₹ 1.20 ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿದೆ ಎಂದು ಸಕಲೇಶಪುರ ನಗರ ಠಾಣೆಗೆ ಶೀಲಾ ಅವರು ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT