ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ

Published 9 ಫೆಬ್ರುವರಿ 2024, 15:45 IST
Last Updated 9 ಫೆಬ್ರುವರಿ 2024, 15:45 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು, ಸಾಧನೆಗಳು ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ–ಮನೆಗೆ ತಲುಪಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.

ತಾಲ್ಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಶುಕ್ರವಾರ ಗೋಡೆ ಬರಹ, ಮನೆ–ಮನೆ ಸಂಪರ್ಕ, ವಾಟ್ಸ್‌ ಆ್ಯಪ್ ಗ್ರುಪ್ ರಚನೆ, ಬೂತ್ ಸಮಿತಿ ಪರಿಶೀಲನೆ, ಪೇಜ್ ಪ್ರಮುಖರ ಭೇಟಿ ಮತ್ತು ನಮೋ ಆ್ಯಪ್ ಪ್ರಚಾರ ಸೇರಿದಂತೆ ಬಿಜೆಪಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಕ್ಷದ ಮುಖಂಡರಾದ ಬಸವರಾಜ್ ಹುಲ್ಲತ್ತಿ, ರಮೇಶ ನಾಯಕ, ಗಣೇಶ್ ಬಡಿಗೇರ, ನಾಗರಾಜ ಹೊನ್ನತ್ತಿ, ಮಲ್ಲಿಕಾರ್ಜುನ ಮಸಿಯಪ್ಪನವರ, ಮೈಲಾರಿ ಸುಣಗಾರ್, ಗಣೇಶ ಹುಲ್ಲತ್ತಿ,, ಹನುಮಂತ ಗಾಡಿ ಬಸಪ್ಪನವರ, ನಾಗರಾಜ್ ಬಾರ್ಕಿ, ಮಂಜು ಅಂಬಿಗೇರ, ಬಿಡಿ ಬಿಲ್ಲಾಳ, ಮಾಲತೇಶ್ ಬಡಿಗೇರ, ನಿಂಗಪ್ಪ ಹೊನ್ನತ್ತಿ, ಪ್ರಕಾಶ ಹಕಾರಿ, ಪ್ರಕಾಶ್ ಬಿಂಗೇರಿ, ಗುತ್ಯಪ್ಪ ಹೀಲದಹಳ್ಳಿ, ಸಂತೋಷ್ ಮೂಕಮ್ಮನವರ, ಅಶೋಕ್ ಪಾಸಿಗರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT