ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಸಂತ ಸೇವಾಲಾಲ್‌ ಅಧ್ಯಯನ ಪೀಠಕ್ಕೆ 4 ಎಕರೆ ಜಮೀನು

Published 27 ಫೆಬ್ರುವರಿ 2024, 15:49 IST
Last Updated 27 ಫೆಬ್ರುವರಿ 2024, 15:49 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ಆಯಕಟ್ಟಿನ ಜಾಗದಲ್ಲಿ ಸಂತ ಸೇವಾಲಾಲ್‌ ಅಧ್ಯಯನ ಪೀಠದ ಸಲುವಾಗಿ ಪ್ರತ್ಯೇಕ ಕಟ್ಟಡಕ್ಕೆ ನಾಲ್ಕು ಎಕರೆ ಜಮೀನು ಮಂಜೂರಾಗಿದ್ದು, ಕಟ್ಟಡದ ನಿರ್ಮಾಣಕ್ಕೆ ₹3 ಕೋಟಿ ಅನುದಾನ ದೊರೆಕಿದೆ ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.

ನಗರ ಹೊರವಲಯದ ಶ್ರೀನಿವಾಸ ಸರಡಗಿ ಕ್ರಾಸ್ ಬಳಿ ಸಂತ ಸೇವಾಲಾಲ್‌ ಮಹಾರಾಜರ ಜಯಂತ್ಯುತ್ಸವ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮಂಗಳವಾರ ನಡೆದ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೇಂದ್ರ ಬಿಜೆಪಿ ಸರ್ಕಾರವು ಬಂಜಾರ ಸಮುದಾಯದ ಶ್ರೇಯೋಭಿವೃದ್ಧಿಗೆ ಮುಂದಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕಾದರೆ ಒಗ್ಗೂಡುವುದು ಅಗತ್ಯವಾಗಿದೆ’ ಎಂದರು.

‘ಮಹಾನ್ ಪುರುಷರನ್ನು ಒಂದು ಜಾತಿಗೆ ಸೀಮಿತ ಮಾಡದೇ ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದವರನ್ನು ಸ್ಮರಿಸಲೇಬೇಕು. ಧರ್ಮ, ಜಾತಿ, ಜನಾಂಗದ ತಾರತಮ್ಯ ಮಾಡದೇ ಮಾನವ ಧರ್ಮ ಶ್ರೇಷ್ಠ ಎಂಬುದು ಅರಿತು ಬಾಳಬೇಕು’ ಎಂದು ಸಮಾಜ ಸೇವಕಿ ಜಯಶ್ರೀ ಮತ್ತಿಮಡು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕವೀರೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ರೇವಣಸಿದ್ದ ಶಿವಾಚಾರ್ಯ, ಬೆಡಸೂರಿನ ಪರ್ವತಲಿಂಗ ಪರಮೇಶ್ವರ ಮಹಾರಾಜ, ಮುಗಳನಾಗಾಂವದ ಜೇಮಸಿಂಗ್ ಮಹಾರಾಜ ಮಾತನಾಡಿದರು.

ಗೊಬ್ಬುರವಾಡಿ ತಾಂಡಾದ ಬಳಿರಾಮ ಮಹಾರಾಜ, ವೀರಭದ್ರ ಶಿವಾಚಾರ್ಯರು, ಗಣಪತ ಮಹಾರಾಜ, ಶಾಂತಾದೇವಿ, ಕಲಾವತಿದೇವಿ, ಶಂಕರ ಮಹಾರಾಜ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಚಿಂಚೋಳಿಯ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ, ಸಂತ ಸೇವಾಲಾಲ್‌ ಜಯಂತಿ ಸಮಿತಿ ಜಿಲ್ಲಾಧ್ಯಕ್ಷ ನಾರಾಯಣ ಪವಾರ, ಶ್ಯಾಮ ಪವಾರ, ವಿಜಯಕುಮಾರ ರಾಠೋಡ, ಅರವಿಂದ ಚವ್ಹಾಣ, ಕಮಲಾಕರ ರಾಠೋಡ, ಪ್ರಿಯಾಂಕಾ ಪವಾರ, ಭೀಮಸಿಂಗ್ ರಾಠೋಡ, ಅನುಸೂಯಾಬಾಯಿ ರಾಠೋಡ, ಸೋಮಶೇಖರ ಗೋನಾಯಕ, ವಿನೋದ ಪಾಟೀಲ್, ಆನಂದ ಪಾಟೀಲ್, ಸಂಗಯ್ಯ ಹಿರೇಮಠ, ರೂಪಸಿಂಗ್ ಪವಾರ, ಬಾಬು ಪವಾರ, ಸುಶೀಲಾಬಾಯಿ ರಾಠೋಡ, ಚಂದ್ರಶೇಖರ ರಾಠೋಡ, ಸುಭಾಷ ಆಡೆ, ಬಾಬುರಾವ ರಾಠೋಡ, ರಾಜು ಪವಾರ ಪಾಲ್ಗೊಂಡಿದ್ದರು. ಗೌರವ ಅಧ್ಯಕ್ಷ ಸಂತೋಷ ಅಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೇವಾಲಾಲ್‌ ಜಯಂತಿಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಬಂಜಾರ ಸಮುದಾಯದ ಮಹಿಳೆಯರು
ಸೇವಾಲಾಲ್‌ ಜಯಂತಿಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಬಂಜಾರ ಸಮುದಾಯದ ಮಹಿಳೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT