ಅಫಜಲಪುರ: ಪಟ್ಟಣದ ಹೊರ ವಲಯದಲ್ಲಿ ಕಲಬುರ್ಗಿ ರಸ್ತೆಯಲ್ಲಿ ಸಂಜೆ ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಯಶವಂತ ತುಕಾರಾಮ ಭಟ್ಟರಗಿ (ಬಾಂಬೆ) (22) ಸಾವನಪ್ಪಿದ್ದಾರೆ.
ಜೀಪ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್ಐ ಸಂತೋಷ ತಟ್ಟೇಪಳ್ಳಿ ಭೇಟಿ ನೀಡಿದ್ದರು.