ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಾಪ್ ರೆಡ್ಡಿ ₹115 ಕೋಟಿ ಒಡೆಯ

Published 14 ಮೇ 2024, 18:35 IST
Last Updated 14 ಮೇ 2024, 18:35 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎನ್‌. ಪ್ರತಾಪ್ ರೆಡ್ಡಿ ಅವರ ಆಸ್ತಿಯ ಮೌಲ್ಯ ₹ 115.35 ಕೋಟಿಯಷ್ಟಿದೆ.

ಪ್ರತಾಪ್ ರೆಡ್ಡಿ ಅವರ ಕೈಯಲ್ಲಿ ₹ 3.65 ಲಕ್ಷ ನಗದು ಇದೆ. ₹ 51.19 ಲಕ್ಷದ ಬಿಎಂಡಬ್ಲ್ಯುಕಾರು, ₹35.81 ಲಕ್ಷದ ಇನ್ನೋವಾ ಕಾರು, ₹ 6.37 ಲಕ್ಷದ ಮಾರುತಿ ಸೆಲೆರಿಯೊ, ₹ 67.74 ಲಕ್ಷದ ಲೆಕ್ಸ್ ಕಾರು ಹಾಗೂ ₹ 38.92 ಲಕ್ಷ ಮೌಲ್ಯದ ಫಾರ್ಚೂನರ್ ಕಾರು ಹೊಂದಿದ್ದಾರೆ. ಬೆಲೆ ಬಾಳುವ ಚಿನ್ನಾಭರಣ ಸಹ ಇದೆ. ₹ 14.57 ಕೋಟಿ ಚರಾಸ್ತಿ ಹಾಗೂ ₹ 100.78 ಕೋಟಿ ಸ್ಥಿರಾಸ್ತಿಯೊಂದಿಗೆ ಒಟ್ಟು ₹ 115.35 ಕೋಟಿ ಸಂಪತ್ತು ಹೊಂದಿದ್ದಾರೆ. ₹ 13.83 ಕೋಟಿ ಸಾಲವೂ ಇದೆ ಎಂದು ಚುನಾವಣೆಯ ನಾಮಪತ್ರ ಸಲ್ಲಿಕೆಯಲ್ಲಿ ಘೋಷಿಸಿಕೊಂಡಿದ್ದಾರೆ.

ಕಲಬುರಗಿಯಲ್ಲಿ ಒಂದು ಮತ್ತು ಬಳ್ಳಾರಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ ಎಂದು ಹೇಳಿಕೊಂಡಿದ್ದಾರೆ.

ಪತ್ನಿ ಎನ್‌.ಶೈಲಜಾ ರೆಡ್ಡಿ ಅವರ ಬಳಿ ₹ 1.50 ಲಕ್ಷ ನಗದು ಸೇರಿ ₹ 4.06 ಕೋಟಿ ಚರಾಸ್ತಿ ಹಾಗೂ ₹ 102.85 ಕೋಟಿ ಸ್ಥಿರಾಸ್ತಿ ಇದೆ. ಮಗ ಎನ್. ಹರ್ಷವರ್ಧನ್ ರೆಡ್ಡಿ ಬಳಿ ₹54.51 ಲಕ್ಷ ಚರಾಸ್ತಿ ಹಾಗೂ ₹49.94 ಲಕ್ಷ ಸ್ಥಿರಾಸ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT