ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟ: ಧಾರವಾಡ ವೃತ್ತ ರನ್ನರ್‌ಅಪ್‌

Published 6 ಜನವರಿ 2024, 15:41 IST
Last Updated 6 ಜನವರಿ 2024, 15:41 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಕೆನರಾ ವೃತ್ತ ಸಮಗ್ರ ಪ್ರಶಸ್ತಿ ಬಾಚಿಕೊಂಡಿತು.

ಮೂರು ದಿನಗಳಿಂದ ನಡೆಯುತ್ತಿದ್ದ ಕ್ರೀಡಾಕೂಟದ ಸಮಾರೋಪ ಸಮಾರಂಭ ಶನಿವಾರ ಜರುಗಿತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಅವರಿಂದ ಕೆನರಾ ವೃತ್ತದ ಕ್ರೀಡಾಪಟುಗಳು ವಿನ್ನರ್‌ ಟ್ರೋಫಿ ಸ್ವೀಕರಿಸಿದರು.

58 ಚಿನ್ನ, 53 ಬೆಳ್ಳಿ ಹಾಗೂ 31 ಕಂಚಿನ ಪದಕ ಗಳಿಸಿ, 526 ಪಾಯಿಂಟ್‌ಗಳೊಂದಿಗೆ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದರು.

ಎರಡನೇ ಸ್ಥಾನದಲ್ಲಿರುವ ಧಾರವಾಡ ವೃತ್ತ 34(+1 ಕ್ರೀಡಾ ಕೋಟಾ) ಚಿನ್ನ, 29 (+1 ಕ್ರೀಡಾ ಕೋಟಾ) ಬೆಳ್ಳಿ ಹಾಗೂ 25 ಕಂಚಿನ ಪದಕ ಗಳಿಸಿದ್ದು, 324 ಪಾಯಿಂಟ್‌ ಮೂಲಕ ರನ್ನರ್‌ಅಪ್‌ ಆಯಿತು.

ಮಂಗಳೂರು ವೃತ್ತ 26 (+13 ಕ್ರೀಡಾ ಕೋಟಾ) ಚಿನ್ನ, 7 (+1 ಕ್ರೀಡಾ ಕೋಟಾ) ಬೆಳ್ಳಿ, 9 (+2 ಕ್ರೀಡಾ ಕೋಟಾ) ಕಂಚು ಗಳಿಸಿದ್ದು, 187 ಪಾಯಿಂಟ್‌ಗಳೊಂದಿಗೆ ತೃತೀಯ ಸ್ಥಾನ ಪಡೆಯಿತು.

ಶಿವಮೊಗ್ಗ ವೃತ್ತ 16 (+2 ಕ್ರೀಡಾ ಕೋಟಾ) ಚಿನ್ನ, 14 ಬೆಳ್ಳಿ, 18 ಕಂಚು ಗಳಿಸಿದ್ದು, 163 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿತು.

ಬೆಂಗಳೂರು ವೃತ್ತ 17 (+5 ಕ್ರೀಡಾ ಕೋಟಾ) ಚಿನ್ನ, 13 (+1 ಕ್ರೀಡಾ ಕೋಟಾ) ಬೆಳ್ಳಿ, 6 (+1 ಕ್ರೀಡಾ ಕೋಟಾ) ಕಂಚು ಜಯಿಸಿದ್ದು, 143 ಪಾಯಿಂಟ್‌ ಪಡೆಯಿತು.

ಬೆಳಗಾವಿ ವೃತ್ತ 8 (+5 ಕ್ರೀಡಾ ಕೋಟಾ) ಚಿನ್ನ, 14 (+1 ಕ್ರೀಡಾ ಕೋಟಾ) ಬೆಳ್ಳಿ, 16 ಕಂಚು ಗಳಿಸಿದ್ದು, 123 ಪಾಯಿಂಟ್‌ ಗಳಿಸಿತು.

ಬಳ್ಳಾರಿ ವೃತ್ತ 11(+2 ಕ್ರೀಡಾ ಕೋಟಾ) ಚಿನ್ನ, 11 (+1 ಕ್ರೀಡಾ ಕೋಟಾ) ಬೆಳ್ಳಿ, 12 (+1 ಕ್ರೀಡಾ ಕೋಟಾ) ಕಂಚು ಗಳಿಸಿದ್ದು, 112 ಪಾಯಿಂಟ್‌ ತನ್ನದಾಗಿಸಿಕೊಂಡಿತು.

ಆತಿಥೇಯ ಕಲಬುರಗಿ ವೃತ್ತ 4 (+1 ಕ್ರೀಡಾ ಕೋಟಾ) ಚಿನ್ನ, 11 ಬೆಳ್ಳಿ, 10 ಕಂಚು ಗಳಿಸಿದ್ದು, 76 ಪಾಯಿಂಟ್‌ ಮೂಲಕ 8ನೇ ಸ್ಥಾನ ಪಡೆಯಿತು.

ಹಾಸನ ವೃತ್ತ 6 ಚಿನ್ನ, 5 ಬೆಳ್ಳಿ, 2 ಕಂಚಿನ ಪದಕಗಳೊಂದಿಗೆ 49 ಪಾಯಿಂಟ್‌ ಗಳಿಸಿತು. ಕೊಡಗು ವೃತ್ತ 4 ಚಿನ್ನ, 6 ಬೆಳ್ಳಿ, 3 ಕಂಚು ಮೂಲಕ 47 ಪಾಯಿಂಟ್‌ ಪಡೆಯಿತು.

ಚಿಕ್ಕಮಗಳೂರು ವೃತ್ತ 3 ಚಿನ್ನ, 5 ಬೆಳ್ಳಿ, 2 ಕಂಚು ಪಡೆದು, 39 ಪಾಯಿಂಟ್‌ ಗಳಿಸಿತು. ಮೈಸೂರು ವೃತ್ತ 4 ಚಿನ್ನ, 3 ಬೆಳ್ಳಿ, 3 ಕಂಚು ಗಳಿಸಿದ್ದು, 38 ಪಾಯಿಂಟ್‌ ಪಡೆಯಿತು. ಚಾಮರಾಜನಗರ ವೃತ್ತ 2 ಚಿನ್ನ, 1 ಬೆಳ್ಳಿ, 5 ಕಂಚು ಮೂಲಕ 25 ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿ ಉಳಿಯಿತು.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ರನ್ನರ್‌ಅಪ್‌ ಟ್ರೋಫಿ ಪಡೆದುಕೊಂಡ ಧಾರವಾಡ ವೃತ್ತದ ಕ್ರೀಡಾಪಟುಗಳ ಸಂಭ್ರಮ   –ಪ್ರಜಾವಾಣಿ ಚಿತ್ರ
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ರನ್ನರ್‌ಅಪ್‌ ಟ್ರೋಫಿ ಪಡೆದುಕೊಂಡ ಧಾರವಾಡ ವೃತ್ತದ ಕ್ರೀಡಾಪಟುಗಳ ಸಂಭ್ರಮ   –ಪ್ರಜಾವಾಣಿ ಚಿತ್ರ

ರಾಜ್ಯದ 13 ವೃತ್ತಗಳಿಂದ 1,234 ಕ್ರೀಡಾಪಟುಗಳು ಭಾಗಿ 8ನೇ ಸ್ಥಾನದಲ್ಲಿ ಆತಿಥೇಯ ಕಲಬುರಗಿ ವೃತ್ತ ಕೊನೆಯ ಸ್ಥಾನದಲ್ಲಿ ಚಾಮರಾಜನಗರ

ಐದು ಚಿನ್ನ ಗಳಿಸಿದ ಸುಮನ್‌ ಧಾರವಾಡ ವೃತ್ತದ ಸುಮನ್‌ ಜಯಂತ್‌ ಅವರು ವಿವಿಧ ಸ್ಪರ್ಧೆಗಳಲ್ಲಿ 5 ಚಿನ್ನ 1 ಬೆಳ್ಳಿ ಗಳಿಸುವ ಮೂಲಕ 28 ಪಾಯಿಂಟ್‌ಗಳೊಂದಿಗೆ ವೈಯಕ್ತಿಕ ಸಾಧನೆ ಮಾಡಿದರು. ಶಿವಮೊಗ್ಗ ವೃತ್ತದ ಸುಧಾ ಎಸ್‌.ವಿ. 3 ಚಿನ್ನ 3 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ 26 ಪಾಯಿಂಗ್‌ಗಳನ್ನು ಗಳಿಸಿದರು. ಹಾಸನದ ವಿನುತಾ ನಾಯ್ಕ್‌ 5 ಚಿನ್ನ ಗಳಿಸಿ 25 ಪಾಯಿಂಟ್‌ಗಳನ್ನು ಪಡೆದರು. ಬೆಂಗಳೂರಿನ ಅನ್ನಪೂರ್ಣಾ ಜಿ. 3 ಚಿನ್ನ 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ 23 ಪಾಯಿಂಟ್‌ಗಳನ್ನು ಪಡೆದರು. ಹೇಮಂತ್‌ ಡಿ.ಪಿ. 4 ಚಿನ್ನ 1 ಕಂಚಿನ ಪದಕದೊಂದಿಗೆ 22 ಪಾಯಿಂಟ್‌ಗಳನ್ನು ಗಳಿಸಿದರು. ಇನ್ನು ಕ್ರೀಡಾ ಕೋಟಾದಲ್ಲಿ ಬೆಳಗಾವಿ ವೃತ್ತದ ಕೆ.ಬಿ.ಚಿಗರಿ 3 ಚಿನ್ನದ ಪದಕ ಗಳಿಸಿ ವೈಯಕ್ತಿಕ ಸಾಧನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT