ಸನ್ನತಿ, ಬೆಣ್ಣೆತೊರಾ ನೀರಾವರಿ ಯೋಜನೆ ಪೂರ್ಣಗೊಳಿಸಲು ಆಗ್ರಹ
ಎರಡು ನೀರಾವರಿ ಯೋಜನೆಗಳಿಂದ ಹಸನಾಗಲಿರುವ ಚಿತ್ತಾಪುರ ವ್ಯಾಪ್ತಿಯ ರೈತರ ಬದುಕು
ಮಲ್ಲಿಕಾರ್ಜುನ ಎಚ್. ಮುಡಬೂಳಕರ್
Published : 28 ಫೆಬ್ರುವರಿ 2026, 7:50 IST
Last Updated : 28 ಫೆಬ್ರುವರಿ 2026, 7:50 IST
ADVERTISEMENT
ಫಾಲೋ ಮಾಡಿ
Comments
ಸೋಮಶೇಖರ ಅಣಿಕೇರಾ
ಮಸ್ತಾನಸಾಬ್ ಇಬ್ರಾಹೀಂ ಸಾಬ್ ಕೊರವಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ತಮ್ಮ ಜೀವಿತ ಕಾಲದಲ್ಲಿ ವಾಡಿ ಪಟ್ಟಣಕ್ಕೆ ಬಂದು ಹೋಗಿದ್ದರ ನೆನಪಿಗೆ ಡಾ.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ಅನುಮತಿಯೊಂದಿಗೆ ₹3 ಕೋಟಿ ಅನುದಾನ ಲಭಿಸಿದೆ. ವಸ್ತು ಸಂಗ್ರಹಾಲಯ ಸಂಶೋಧನಾ ಕೇಂದ್ರ ಗ್ರಂಥಾಲಯ ನಿರ್ಮಾಣ ಬೌದ್ಧ ಧಮ್ಮ ಅಧ್ಯಯನ ಕೇಂದ್ರ ನಿರ್ಮಾಣ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಬಜೆಟ್ಟಿನಲ್ಲಿ ₹25 ಕೋಟಿ ಅನುದಾನ ನೀಡಬೇಕು
ವಿಕ್ರಂ ತೇಜಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಹೋರಾಟ ಸಮಿತಿ
ಸನ್ನತಿ ಏತ ನೀರಾವರಿ ಯೋಜನೆ ನಾಲವಾರ ಹೋಬಳಿ ವ್ಯಾಪ್ತಿಯ ಸನ್ನತಿ ಕನಗನಹಳ್ಳಿ ಕೊಲ್ಲೂರ ತರಕಸಪೇಠ ರಾಂಪುರಹಳ್ಳಿ ಬನ್ನಟ್ಟಿ ಹುಳಂಡಗೇರಾ ಕುಂಬಾರಹಳ್ಳಿ ಗ್ರಾಮಗಳಿಗೆ ವರದಾನವಾಗಿದೆ. ಹೊಲಗಳಿಗೆ ನೀರು ತಲುಪಿಸುವ ಮರಿಕಾಲುವೆ ನಿರ್ಮಾಣವಿಲ್ಲದೆ ಹೊಲಗಳಿಗೆ ಇಂದಿಗೂ ನೀರು ಹರಿದಿಲ್ಲ. ಯೋಜನೆಯಲ್ಲಿರುವ ಕಾಮಗಾರಿ ತ್ವರಿತ ಪೂರ್ಣಗೊಳಿಸಿ ರೈತರಿಗೆ ಸೌಲಭ್ಯ ಒದಗಿಸಬೇಕು. ಕಾಮಗಾರಿಗೆ ಬೇಕಾದ ಅನುದಾನವನ್ನು ಸರ್ಕಾರ ಬಜೆಟ್ಟಿನಲ್ಲಿ ಘೋಷಿಸಬೇಕು
ಸೋಮಶೇಖರ ಅಣಿಕೇರಾ ಸನ್ನತಿ ಗ್ರಾಮದ ರೈತ
ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಮಲಕೂಡ ಇವಣಿ ಬೆಳಗುಂಪಾ ಕಾಟಮ್ಮದೇವರಹಳ್ಳಿ ದಂಡೋತಿ ಗ್ರಾಮಗಳ ರೈತರಿಗೆ ಬೆಣ್ಣೆತೊರಾ ಯೋಜನೆಯ ಸೌಲಭ್ಯ ದೊರೆಯುತ್ತಿಲ್ಲ. ಮುಖ್ಯ ಕಾಲುವೆ ನಿರ್ಮಿಸಿದರೂ ರೈತರ ಹೊಲಗಳಿಗೆ ನೀರು ಹರಿಸುವ ಉಪ ಕಾಲುವೆ ಮರಿಕಾಲುವೆ ನಿರ್ಮಾಣ ಇಂದಿಗೂ ನನೆಗುದಿಗೆ ಬಿದ್ದಿದೆ. ಬಾಕಿ ಉಳಿದಿರುವ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡುವ ಭರವಸೆಯಿದೆ
ಮಸ್ತಾನಸಾಬ್ ಇಬ್ರಾಹೀಂ ಸಾಬ್ ಕೊರವಿ ಬೆಣ್ಣೆತೊರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ